ಬೆಳ್ತಂಗಡಿ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ತರಬೇತಿ ಶಿಬಿರ

ಬೆಳ್ತಂಗಡಿ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಯೋಗಶಿಕ್ಷಣ ಮತ್ತು ತರಬೇತಿ ನೀಡುವ ಸಲುವಾಗಿ ಶಾಲೆಯ ಕ್ರೀಡಾ ಸಂಘದ ವತಿಯಿಂದ ಯೋಗ ತರಬೇತಿ ಶಿಬಿರವನ್ನು ಜೂ.14 ರಂದು ಆಯೋಜಿಸಲಾಗಿತ್ತು.
ಯೋಗ ತರಬೇತಿ ಶಿಬಿರವನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಎಂ.ಆರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ತರಬೇತುದಾರ ಎಸ್‌ಡಿಎಮ್ ಬಿಎನ್‌ವೈಎಸ್ ಕಾಲೇಜಿನ ವಿದ್ಯಾರ್ಥಿ ದೀಪಕ್ ರೆಡ್ಡಿ, ಯೋಗದ ಮಹತ್ವ ಮತ್ತು ಯೋಗ ಶಿಬಿರದ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಕ್ರೀಡಾ ಸಂಘದ ಸುಮಾರು 50 ಯೋಗ ಶಿಬಿರಾರ್ಥಿಗಳು ಭಾಗವಹಿಸಿದರು.
ಶಾಲಾ ಕ್ರೀಡಾ ಸಂಘದ ಸಂಚಾಲಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್  ಎನ್.ರವರು ಕಾರ್ಯಕ್ರಮವನ್ನು ಆಯೋಜಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.