ಸೇವಾಧಾಮದ ಪುನಶ್ಚೇತನ ಕೇಂದ್ರದಿಂದ ಹೊಲಿಗೆ ಯಂತ್ರಕ್ಕೆ ವಿದ್ಯುತ್ ಮೋಟಾರು ಕೊಡುಗೆ

ಚಿಬಿದ್ರೆ: ಇಲ್ಲಿಯ ಪೆರಿಯಡ್ಕ ನಿವಾಸಿ, ಸುದ್ದಿಬಿಡುಗಡೆ ಪತ್ರಿಕೆ ವಿತರಕ ಸೇಸಪ್ಪ ಗೌಡರಿಗೆ ಸೇವಾಧಾಮದ ಪುನಶ್ಚೇತನ ಕೇಂದ್ರದಿಂದ ಹೊಲಿಗೆ ಯಂತ್ರಕ್ಕೆ ಉಚಿತ ವಿದ್ಯುತ್ ಮೋಟಾರು ಜೂ.11 ರಂದು ವಿತರಿಸಲಾಯಿತು.
ಸೇಸಪ್ಪ ಗೌಡ ರವರು ಜೀವನೋಪಾಯಕ್ಕಾಗಿ ಟೈಲರಿಂಗ್ ವೃತಿ ನಡೆಸುತ್ತಿದ್ದು, 12 ವರ್ಷಗಳ ಹಿಂದೆ ಜ್ವರದಿಂದ ಬೆನ್ನುಹುರಿ ಸಮಸ್ಯೆಗೊಳಗಾಗಿದ್ದರು. ಆದ್ದರಿಂದ ಇವರಿಗೆ ಅನುಕೂಲವಾಗುವ ದೃಷ್ಟಿಯಿಂದ ಇವರ ಹೊಲಿಗೆಯಂತ್ರಕ್ಕೆ ಸೇವಾಧಾಮದ ಪುನಶ್ಚೇತನ ಕೇಂದ್ರದಿಂದ ವಿದ್ಯುತ್ ಮೋಟಾರನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಸೇವಾಧಾಮದ ಪುನಶ್ಚೇತನ ಕೇಂದ್ರದ ಸಂಚಾಲಕ ಪುರಂದರ ರಾವ್, ಮ್ಯಾನೇಜರ್ ಬಾಲಕೃಷ್ಣ, ಸೇವಾಭಾರತಿಯ ಅಧ್ಯಕ್ಷ ವಿನಾಯಕ ರಾವ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.