HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಇಳಂತಿಲ ಶಾಲಾ ಮಂತ್ರಿಮಂಡಲ ರಚನೆ

ಇಳಂತಿಲ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಳಂತಿಲ ಇಲ್ಲಿಯ 2019-20ನೇ ಶೈಕ್ಷಣಿಕ ಸಾಲಿನ ಮಂತ್ರಿಮಂಡಲದ ರಚನೆಯು ಇತ್ತೀಚೆಗೆ ಜರಗಿತು. ಶಾಲಾ ಮುಖ್ಯಮಂತ್ರಿಯಾಗಿ 8ನೇ ತರಗತಿಯ ವಿದ್ಯಾರ್ಥಿನಿ ಅಂಕಿತಾ, ಉಪ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಸ್ಮಿತಾ ಸರಸ್ವತಿ ಅವಿರೋಧವಾಗಿ ಆಯ್ಕೆಯಾದರು.
ಉಳಿದಂತೆ ಗೃಹಮಂತ್ರಿಯಾಗಿ ಮಹಮ್ಮದ್ ನಸೀಹ್, ಶಿಕ್ಷಣ ಮಂತ್ರಿಯಾಗಿ ಶ್ವೇತಾ, ಕೆ, ಸಾಂಸ್ಕೃತಿಕ ಮಂತ್ರಿಯಾಗಿ ಧನ್ಯಶ್ರೀ, ಆರೋಗ್ಯ ಮಂತ್ರಿಯಾಗಿ ಅಮೀನತ್ ಸಪ್ವಾನ, ನೀರಾವರಿ ಮಂತ್ರಿಯಾಗಿ ಮರ್ಷಾದ್, ಕೃಷಿ ಮಂತ್ರಿಯಾಗಿ ಮುಬಶಿರ್, ಕ್ರೀಡಾ ಮಂತ್ರಿಯಾಗಿ ವಿಶಾಲ್, ಶಿಸ್ತಿನ ಮಂತ್ರಿಯಾಗಿ ಶಿಲ್ಪಶ್ರೀ, ಸ್ವಚ್ಚತಾ ಮಂತ್ರಿಯಾಗಿ ಗೌರಿ, ಅಕ್ಷರದಾಸೋಹ ಮಂತ್ರಿಯಾಗಿ ಪ್ರತೀಕ್ಷಾ ಮತ್ತು ವಿರೋಧ ಪಕ್ಷದ ನಾಯಕಿಯಾಗಿ ರಿಷಾ ಆಯ್ಕೆಯಾದರು.
ಆಯ್ಕೆಯ ನೇತೃತ್ವವನ್ನು ಪ್ರಭಾರ ಮುಖ್ಯ ಶಿಕ್ಷಕಿ ನಯನಾ, ಪಿ, ಸಹ ಶಿಕ್ಷಕರಾದ ಉಮಾವತಿ, ಗೀತಾ ಎಂ.ಎನ್, ಜ್ಯೋತಿ, ಸುಚಿತ್ರಾ ಎಸ್ ಮತ್ತು ಗೌರವ ಶಿಕ್ಷಕಿ ಯಶೋಧಾ ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.