ಮೇಲಂತಬೆಟ್ಟು: ಇಲ್ಲಿಯ ಕಲ್ಲಗುಡ್ಡೆ ಬಳಿ ವ್ಯಕ್ತಿಯೋರ್ವರು ಅನಾರೋಗ್ಯದಿಂದ ಬೇಸತ್ತು ತಮ್ಮ ಮನೆಯ ಫ್ಯಾನ್ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.13 ರಂದು ವರದಿಯಾಗಿದೆ.
ಮೇಲಂತಬೆಟ್ಟು ಪಂಚಾಯತ್ ಸಮೀಪದ ಕಲ್ಲಗುಡ್ಡೆ ನಿವಾಸಿ ಸಿಲ್ವೆಸ್ಟರ್ ಗೋನ್ಸಾಲಿಸ್ ಆತ್ಮಹತ್ಯೆಮಾಡಿಕೊಂಡವರು. ಇವರ ಪತ್ನಿ ಸಂಜೆ 5 ಗಂಟೆಯ ಹೊತ್ತಿನಲಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮೃತರ ಪತ್ನಿ ಬೆಳ್ತಂಗಡಿ ಅಯ್ಯಪ್ಪ ಮಂದಿರದ ಸಮೀಪ ಜ್ಯೂಸ್ಅಂಗಡಿ ನಡೆಸುತ್ತಿದ್ದು, ಓರ್ವ ಪುತ್ರ ಗೋವಾದಲ್ಲಿ ಧರ್ಮಗುರುಗಳ ಶಿಕ್ಷಣ ಪಡೆಯುತ್ತಿದ್ದಾರೆ. ಓರ್ವ ಪುತ್ರಿ ಮಡಂತ್ಯಾರು ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.
ಸಿಲ್ವೆಸ್ಟರ್ ಗೋನ್ಸಾಲಿಸ್ ರವರ ಪತ್ನಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.