HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶ್ರೀ ಗುರುದೇವ  ದತ್ತ್ತಾಂಜನೇಯ ಭಜನಾ ಸಮಿತಿ ವಾರ್ಷಿಕೋತ್ಸವ

ತೆಂಕಕಾರಂದೂರು: ಇಲ್ಲಿಯ ಶ್ರೀ ಗುರುದೇವ ದತ್ತ್ತಾಂಜನೇಯ ಭಜನಾ ಸಮಿತಿಯ 18 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪುಸ್ತಕ ವಿತ್ತರಣಾ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸತೀಶ್ ಎಚ್ ಮಾತನಾಡಿ, ಯಾವುದೇ ಪ್ರಚಾರವಿಲ್ಲದೆ ಪ್ರತಿ ಸೋಮವಾರ ೪೨ ಮನೆಯಲ್ಲಿ ನಿರಂತರ ಭಜನೆಯನ್ನು ಮಾಡಿ, ಇಂತಹ ಸಮಾಜ ಮುಖಿ ಕೆಲಸವನ್ನು ನಡೆಸಿಕೊಂಡು ಬರುವುದು ಶ್ಲಾಘನೀಯ. ಇನ್ನು ಮುಂದೆಯೂ ಕೂಡ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಸಮಾಜಕ್ಕೆ ಮಾದರಿಯಾಗಿ ಎಂದು ಸಮಿತಿಗೆ ಶುಭ ಹಾರೈಸಿದರು.
ಇನ್ನೋರ್ವ ಅತಿಥಿ ನಾರಾಯಣ ರಾವ್ ಮಾತನಾಡಿ, ದತ್ತಾಂಜನೇಯ ಭಜನೆ ಸಮಿತಿಯ ಸದಸ್ಯರು ಗ್ರಾಮಕ್ಕೆ ಮಾದರಿಯಗುವ ಕೆಲಸವನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬಂದಿರುತ್ತಾರೆ. ಇನ್ನು ಮುಂದೆಯೂ ಉತ್ತಮ ಸಮಾಜ ಸೇವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಗಲಿ ಎಂದು ನುಡಿದರು.
ಕೇಳ್ಕರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ರಮಾನಂದ ಗುಡ್ಡಾಜೆ ಮಾತನಾಡಿ, ದೇವರನ್ನು ಒಲಿಸುವ ಸುಲಭ ವಿಧಾನ ಇದ್ದರೆ ಅದು ಭಜನೆ. ಈ ಭಜನೆಯು ನಿರಂತರ ನಡೆದು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದರು.
ಭಜನಾ ಸಮಿತಿ ಗೌರವಾಧ್ಯಕ್ಷ ಹರೀಶ್ ಕಲ್ಲಾಜೆ, ಅಧ್ಯಕ್ಷ ಲೋಕೇಶ್ ಕಲ್ಲಾಜೆ, ರಾಜು ಪೂಜಾರಿ, ಸಂಜೀವ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಯೋಗೀಶ್ ಕಲ್ಲಾಜೆ, ರಿತೇಶ್, ಸ್ಮಿತಾ, ಸಚಿನ್ ಹಾಗು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಶಿವರಾಮ ದೇವಾಡಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರತಾಪ್ ಕಲ್ಲಾಜೆ ಸ್ವಾಗತಿಸಿ, ಭಜನಾ ಸಮಿತಿ ಅಶೋಕ್ ಟೈಲರ್ ವರದಿ ವಾಚಿಸಿ, ಶಿವರಾಮ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ಚೇತನ್ ಧನ್ಯವಾದವಿತ್ತರು. ಪ್ರಕಾಶ್ ಕಲ್ಲಾಜೆ ಸಹಕರಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.