HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕೊಯ್ಯೂರು: ಕಾಲುಜಾರಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

ಕೊಯ್ಯೂರು: ಇಲ್ಲಿಯ ಕಿರಿಯಾಡಿ ಬಳಿ ವ್ಯಕ್ತಿಯೋರ್ವರು ತಮ್ಮ ಮನೆಯ ಬಾವಿಕಟ್ಟೆಯ ಸುತ್ತ ಇರುವ ಕಳೆ ಕೀಳುವ ಸಂದರ್ಭ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ 7.30 ರ ಸಮಯದಲ್ಲಿ( ಜೂ.14) ನಡೆದಿದೆ.
ಕೊಯ್ಯೂರಿನ ಹಿದಿಂಗಲ ನಿವಾಸಿ ಮಂಜುನಾಥ ಗೌಡರವರ ಪುತ್ರ, ವೈಷ್ಣವಿ  ಆಟೋ  ಚಾಲಕ ಸೋಮನಾಥ ಗೌಡ(47.ವ) ಈ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿ.
ಸೋಮನಾಥ ರವರು ಮನೆಯ ಬಾವಿಕಟ್ಟೆಯ ಸುತ್ತಲಿರುವ ಕಳೆ ಕೀಳುವ ಸಂದರ್ಭದಲ್ಲಿ ಬಾವಿದಂಡೆ ಬಳಿ ಕಾಲುಜಾರಿದ್ದು, ಬಾವಿಯೊಳಗೆ ಅಳವಡಿಸಿರುವ ಕಾಂಕ್ರಿಟ್‌ರಿಂಗ್ ದಂಡೆಗೆ ತಲೆಬಡಿದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.
ಇವರು ಕಿರಿಯಾಡಿ  ಭಜನಾ ಮಂಡಳಿಯ  ಕೋಶಾಧಿಕಾರಿಯಾಗಿ, ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.