ಬಳಂಜ: ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ಬಳಂಜ: ದ.ಕ ಜಿ.ಪ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಳಂಜ ಇಲ್ಲಿ ಅಟ್ಲಾಜೆ ದಿ| ನಾರಾಯಣ ನಾಯ್ಗರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಇತರ ಶೈಕ್ಷಣಿಕ ಪ್ರೋತ್ಸಾಹಕಗಳ ವಿತರಣಾ ಕಾರ್ಯಕ್ರಮವು ಜೂ.13 ರಂದು ಶಾಲಾ ವಠಾರದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಬಳಂಜ ಪ್ರೌಢಶಾಲಾ ಶಾಲಾಭಿವೃದ್ಧಿ ಅಧ್ಯಕ್ಷ ಕೆ. ವಸಂತ ಸಾಲ್ಯಾನ್, ಪ್ರಾಥಮಿಕ ಶಾಲಾಭಿವೃದ್ಧಿ ಅಧ್ಯಕ್ಷ ಸತೀಶ್ ಕೆ, ಉದ್ಯಮಿ ಭರತ್ ಶೆಟ್ಟಿ, ಬಳಂಜ ಗ್ರಾ.ಪಂ. ಸದಸ್ಯರಾದ ಶೋಭಾ , ರೇವತಿ, ಪ್ರಮುಖರಾದ ಸತೀಶ್ ರೈ ಬಾರ್‍ದಡ್ಕ, ರಾಜೇಂದ್ರ ಶೆಟ್ಟಿ, ಸಂತೊಷ್ ಕುಮಾರ್ ಕಾಪಿನಡ್ಕ, ವಿಶ್ವನಾಥ ಹೊಳ್ಳ ಮಜ್ಜೈನಿ ಬೈಲು, ಪ್ರಮೋದ್ ಕುಮಾರ್ ಜೈನ್, ಸುರೇಶ್ ಶೆಟ್ಟಿ ಕುರೇಲ್ಯ,ರಮಾನಾಥ ಶೆಟ್ಟಿ ಪಂಬಾಜೆ, ರಾಕೇಶ್ ಹೆಗ್ಡೆ ಬಳಂಜ, ಜಗನ್ನಾಥ ಅಣಿಂಜೆ, ಗಣೇಶ್ ಸಂಭ್ರಮ, ಕೇಶವ, ಜೆರೋಮ್, ಶೇಖರ ಶೆಟ್ಟಿ, ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2018-19ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಾದ ನಿತಿನ್ ಎಸ್ ಶೆಟ್ಟಿ, ಪ್ರಿಯಾ, ಹರ್ಷಿಣಿ, ಅನುಪ್ರಿಯಾ, ಕಿರಣ್ ಕುಮಾರ್, ಗಣೇಶ್, ಶ್ರಮ, ಪ್ರತೀಕ್ಷಾ ಇವರುಗಳನ್ನು ಹಾಗೂ ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ ಶಾಲಾ ಶಿಕ್ಷಕರಾದ ಮೋಹಿನಿ, ಪ್ರತಿಮಾ, ಪ್ರಸಾದಿನಿ, ರೂಪಾ, ಸುಕನ್ಯ, ಗಣೇಶ್ ಇವರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.