HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಐಶಾರಾಮಿ ಕಾರಿನಲ್ಲಿ ಅಮಾನುಶವಾಗಿ ಜಾನುವಾರುಗಳ ಅಕ್ರಮ ಸಾಗಾಟ: ಇಬ್ಬರ ಬಂಧನ, ಇನ್ನಿಬ್ಬರಿಗೆ ಶೋಧ

ಮುಂಡಾಜೆ: ಮುಂಡಾಜೆ ಗ್ರಾಮದ ಸನ್ಯಾಸಿಕಟ್ಟೆ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿ ತಿರುವು ಬಳಿ ಫೋರ್ಡು ಇಕೋಸ್ಪೋಟ್ಸ್ ಕಾರೊಂದು ಜೂ.7 ರಂದು ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ನಡೆದಿದ್ದು, ಇದರ ಜೊತೆಗೆ ಈ ಐಶಾರಾಮಿ ವಾಹನದಲ್ಲಿ ಅಮಾನುಷವಾಗಿ ಜಾನುವಾರುಗಳನ್ನು ಅಕ್ರಮವಾಗಿ  ಸಾಗಿಸಿದ ಘಟನೆಗೆ ಸಂಬಂಧಿಸಿದಂತೆ ಎಚ್ಚೆತ್ತ ಪೊಲೀಸರು ತ್ವರಿತ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಮೂಡಬಿದ್ರೆ ತೋಡಾರು ಹಿದಾಯತ್ ನಗರ ನಿವಾಸಿಗಳಾದ ಕಾರು ಮಾಲಕ ಅನ್ಸಾರ್ (27ವ.) ಮತ್ತು ಝುಬೈರ್( 26ವ.) ಎಂಬವರೆಂದು ಗುರುತಿಸಲಾಗಿದೆ.
ಜಾನುವಾರು ಸಾಗಾಟಕ್ಕೆ ಬಳಸಿದ್ದ ಕಾರಿನ ನೊಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಪೊಲೀಸ್ ಇಲಾಖೆ ಪತ್ತೆಹಚ್ಚಿದ್ದು, ಕಾರಿನ ಚಾಸ್ಸಿ ನಂಬರ್ ಅಧಾರದಲ್ಲಿ ವಾಹನದ ಮಾಲಿಕನ ಸುಳಿವು ಲಭಿಸಿದೆ. ಆರೋಪಿಗಳ ಪತ್ತೆಗಾಗಿ ಬಂಟ್ವಾಳ ಎಎಸ್‌ಪಿ ಡಾ.ಸೈಡುಲ್ಲಾ ಅಡಾವತ್ ಐಪಿಎಸ್ ಅವರ ನೇತೃತ್ವದಲ್ಲಿ ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಕುಮಾರ್ ಪಿ.ಜಿ, ವೇಣೂರು ಪೊಲೀಸ್ ಠಾಣಾ ಎಸ್‌ಐ ನಾಗರಾಜ್  ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಇದೀಗ ಅವರು ಕಾರ್ಯಾಚರಣೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಈ ಜಾಲದಲ್ಲಿ ಅನೇಕ ಮಂದಿ ಇರುವ ಬಗ್ಗೆ ಸುಳಿವುಗಳು ಲಭಿಸಿದ್ದು ಅವರ ಪತ್ತೆ ಕ್ರಮ ಕೈಗೊಳ್ಳಲಾಗಿದೆ.
ಅಫರಾಧದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 4, 5, 8, 9, 11 ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964, ಕಲಂ: 11(ಡಿ), ಪ್ರಾಣಿ ಹಿಂಸೆ ನಿಷೇಧ ಕಾಯ್ದೆ 1960 ಮತ್ತು ಕಲಂ: 279, 379 ಐ.ಪಿ.ಸಿ. ಯಂತೆ ಪ್ರಕರಣದ ದಾಖಲಾಗಿದೆ.

ಕರ್ತವ್ಯ ಲೋಪ: ಧರ್ಮಸ್ಥಳ ಠಾಣಾ ಪಿ.ಸಿ ಮಂಜುನಾಥ್ ಅಮಾನತು
ಗೋಸಾಗಾಟದ ವಾಹನ ಮೂಡಿಗೆರೆ ಕಡೆಯಿಂದ ಬಂದಿದ್ದೇ ಆಗಿದ್ದಲ್ಲಿ ಕೊಟ್ಟಿಗೆಹಾರ ಮತ್ತು ಚಾರ್ಮಾಡಿ ಪೊಲೀಸ್ ಚೆಕ್‌ಪೋಸ್ಟ್ ದಾಟಿ ಮುಂದೆ ಬಂದಿದೆ. ಆದರೂ ಅಲ್ಲಿನ ಪೊಲೀಸ್ ಸಿಬ್ಬಂದಿಗಳು ಸೂಕ್ತ ತಪಾಸಣೆ ನಡೆಸಲು ಎಡವಿದ್ದಾರೆಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ತನಿಖಾಧಿಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರು ನೀಡಿದ ವರದಿಯಂತೆ ಧರ್ಮಸ್ಥಳ ಠಾಣೆಯ ಪಿ.ಸಿ ಮಂಜನಾಥ್ ಅವರನ್ನು ಅಮಾನತುಗೊಳಿಸಿ ಎಸ್‌ಪಿ ಆದೇಶ ನೀಡಿದ್ದಾರೆ.
ಚೆಕ್‌ಪೋಸ್ಟ್‌ನಲ್ಲಿ ಅಂದು ಅವರು ಕರ್ತವ್ಯ ನಿರ್ವಹಿಸಿದ್ದು, ಈ ಅಕ್ರಮ ಸಾಗಾಟ ಅವರ ಅರಿವಿಗೆ ಬಾರದೆ ಇದ್ದುದರಿಂದ ಅವರಿಂದ ಕರ್ತವ್ಯಲೋಪವಾಗಿದೆ ಎಂದು ಇಲಾಖೆ ಅಭಿಪ್ರಾಪಟ್ಟಿದ್ದು ಅದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರು ಇತ್ತೀಚಿಗಷ್ಟೇ ಧರ್ಮಸ್ಥಳ ಠಾಣೆಗೆ ಹೊಸದಾಗಿ ನೇಮಕಗೊಂಡಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.