ಜೂ. 21: ಜ್ಯೋತಿ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ “ಉಚಿತ ಕ್ಯಾನ್ಸರ್ ತಪಾಸಣೆ” ಶಿಬಿರ

ಲಾಯಿಲ: ಜ್ಯೋತಿ ಆಸ್ಪತ್ರೆ ಲಾಯಿಲ ಇದು ಯಶಸ್ವಿಯಾಗಿ 15 ನೇ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜೂ. 21 ರಂದು ಒಂದು ದಿನ ಮಹಿಳೆಯರಿಗಾಗಿ ಉಚಿತವಾಗಿ ಕ್ಯಾನ್ಸರ್ ತಾಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
40 ವರ್ಷ ಮೇಲ್ಪಟ್ಟ ಮಹಿಳೆಯರು ಈ ಶಿಬಿರದಲ್ಲಿ ಭಾಗಿಯಾಗಿ ಸ್ತನ, ಗರ್ಭಕೋಶ ಮತ್ತು ಮಹಿಳೆಯರಲ್ಲಿ ಕಂಡು ಬರುವ ಬಿಳುಪು ಕಾಯಿಲೆಯನ್ನು ಉಚಿತವಾಗಿ ತಪಾಸಣೆ ನಡೆಸಬಹುದು. ಅಲ್ಲದೆ ಪ್ಯಾಪ್ ಸ್ಮಿಯರ್, ಪೆಲ್ವಿಸ್ ಸ್ಕ್ಯಾನಿಂಗ್ ಇದು ಉಚಿತ ಪ್ರವೇಶಾತಿಯೊಂದಿಗೆ 50 ಶೇ. ರಿಯಾಯಿತಿ ದರದಲ್ಲಿ ನಡೆಸಲಾಗುವುದು. ಅಲ್ಲದೆ ಈ ಶಿಬಿರದಲ್ಲಿ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣೆ ಕೂಡ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.