ಕಲ್ಮಂಜ: ಮರಣ ಕಾದಿದ್ದ ಮರ ಕೊನೆಗೂ ಧರೆಗೆ…

ಕಲ್ಮಂಜ: ಇಲ್ಲಿನ ಸರಕಾರಿ ಶಾಲೆ ಬಳಿಯ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ಬುಡ ಬೆಂಕಿಗೀಡಾಗಿ ಅಪಾಯ ಕಾದಿದ್ದ ಮರ ಇದೀಗ ಕೊನೆಗೂ ರಸ್ತೆಯ ಆಚೆಗೆ ಮಗುಚಿಬಿದ್ದು ಭಾರೀ ಅನಾಹುತ ತಪ್ಪಿದೆ.
ತಿರುವಿನಲ್ಲಿರುವ ಮರದ ಬುಡ ದೊಡ್ಡ ತೂತಾಗಿ ಯಾವುದೇ ಸಂದರ್ಭ ಬೀಳುವ ಸ್ಥಿತಿಯಲ್ಲಿತ್ತು. ಈ ಬಗ್ಗೆ ಪಂಚಾಯತ್, ಅರಣ್ಯ ಇಲಾಖೆ ಗಮನಸೆಳೆದಿದ್ದರೂ ಪ್ರಯೋಜನವಾಗಿರಲಿಲ್ಲ ಎಂಬುದು ಸ್ಥಳೀಯ ಸಾಮಾಜಿಕ ಕಳಕಳಿಯ ಯುವಕ ರಾಜ್‌ಕಿಶನ್ ಅವರ ದೂರು.
ಉಜಿರೆಯಲ್ಲಿ ಇತ್ತೀಚೆಗೆ ಚಲಿಸುವ ಕಾರಿನ ಮೇಲೆ ಇದೇ ರೀತಿ ಮರವೊಂದು ಉರುಳಿಬಿದ್ದು ಇಬ್ಬರು ಯುವಕರು ಧಾರುಣವಾಗಿ ಮೃತಪಟ್ಟ ಘಟನೆ ಬಳಿಕವಂತೂ ಅವರು ಇಲಾಖೆಗಳನ್ನು ಎಚ್ಚರಿಸುವ ಕೆಲಸ ಮಾಡಿದ್ದರು. ಅದಾಗ್ಯೂ ಸ್ಪಂದನೆ ದೊರೆಯದೇ ಇದ್ದಾಗ ಕೊನೆಗೆ ಮಾಧ್ಯಮದ ಮೊರೆ ಹೋಗಿದ್ದರು.
ಸದ್ರಿ ಘನಗಾತ್ರದ ಮರ ಒಂದು ವೇಳೆ ರಸ್ತೆಗೆ ಭಾಗಕ್ಕೇನಾದರೂ ಮಗುಚಿಬೀಳುತ್ತಿದ್ದರೆ ಉಜಿರೆ ಘಟನೆ ಮರುಕಳಿಸುವುದು ತಪ್ಪಿದ್ದು ಇದೀಗ ಮರ ರಸ್ತೆಯ ಇನ್ನೊಂದು ಮಗ್ಗುಲಿಗೆ ಧರಾಶಾಹಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.