HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಜಾಗ ಅತಿಕ್ರಮಣ ಆರೋಪ: ತಾ.ಪಂ ಇ.ಒ ಪರಿಶೀಲನೆ

ಲಾಯಿಲ: ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ಸರ್ವೆ ನಂಬ್ರ 198ರಲ್ಲಿರುವ 4.67 ಎಕ್ರೆ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಿಸಿ ಜಾಗವನ್ನು ಲೆವಲ್ ಮಾಡಿ ಮರ ನಾಶ ಮಾಡಿರುವ ಬಗ್ಗೆ ಸಾರ್ವಜನಿಕರ ಪರವಾಗಿ ಅಂಬೇಡ್ಕರ್ ನಗರ ಮನೆ ನಿವಾಸಿ ನಾಗರಾಜ್ ಎಸ್. ಲಾಯಿಲ ತಹಶೀಲ್ದಾರರಿಗೆ, ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ, ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಸ್ಥಳೀಯ ನಿವಾಸಿಯೋರ್ವರು ಜೆಸಿಬಿಯಿಂದ ಅಗೆದು ಮರಮಟ್ಟುಗಳನ್ನು ನಾಶ ಮಾಡಿ ಇದೀಗ ಸ್ವಂತಕ್ಕಾಗಿ ಅಕ್ರಮಿಕೊಂಡು ಬೇರೆ ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳಲು ಸಂಚು ರೂಪಿಸುತ್ತಿದ್ದು, ಈ ಜಾಗವನ್ನು ಸರಕಾರದ ವಶ ಪಡೆದುಕೊಂಡು ಈ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ನಿವೇಶನ ರಹಿತರಿದ್ದು, ಅವರಿಗೆ ಮನೆ ನಿವೇಶನಕ್ಕೆ ಮೀಸಲಿಡುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
ದೂರಿನ ಹಿನ್ನಲೆಯಲ್ಲಿ ಸ್ಥಳಕ್ಕೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಇ ಜಯರಾಮ್, ಲಾಯಿಲ ಗ್ರಾ.ಪಂ ಪಿಡಿಒ ರಿತೇಶ್‌ಎನ್. ಪುತ್ರನ್, ಕಾರ್ಯದರ್ಶಿ ಪುಟ್ಟುಸ್ವಾಮಿ ಭೇಟಿ ನೀಡಿ ಸದ್ರಿ ಜಮೀನನ್ನು ಮನೆ ನಿವೇಶನಕ್ಕೆ ಮೀಸಲಿಡುವ ಬಗ್ಗೆ ತಹಶೀಲ್ದಾರರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.