ಬೆಳಾಲು ಅನನ್ಯರಿಗೆ ವಿಶ್ವಮಾನ್ಯ ಕನ್ನಡಿಗ ಬಾಲ ಪ್ರತಿಭೆ ಪ್ರಶಸ್ತಿ

ಬೆಳಾಲು: ರಾಜ್ಯಮಟ್ಟದ ಸಾಹಿತ್ಯಾತ್ಮಕ ಜಾನಪದ ಹಾಗೂ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಅಯೋಜಿಸಿದ ಪ್ರೇಮಕವಿ ಕೆ.ಎಸ್.ನ ಸ್ಮರಣಾರ್ಥ ಸಾಹಿತ್ಯೋತ್ಸವ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬೆಳಾಲಿನ ಅನನ್ಯ ರವರಿಗೆ ವಿಶ್ವಮಾನ್ಯ ಕನ್ನಡಿಗ ಬಾಲಪ್ರತಿಭೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನನ್ಯರವರ ಜಿಲ್ಲಾಮಟ್ಟ, ರಾಜ್ಯಮಟ್ಟ ಹಾಗೂ ಅಂತರ್ ರಾಜ್ಯಮಟ್ಟದಲ್ಲಿ ನೃತ್ಯ, ಯಕ್ಷಗಾನ ಪ್ರದರ್ಶನಕ್ಕೆ ಈ ಗೌರವ ಲಭಿಸಿದೆ.
ಅನನ್ಯ ರವರು ಗೋವಾ ರಾಜ್ಯದಲ್ಲಿ ನಡೆದ ಸೌತ್ ಇಂಡಿಯಾ ಡ್ಯಾನ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಇವರು ಬೆಳಾಲು ಗ್ರಾಮದ ವಿಶ್ವನಾಥ ಪೂಜಾರಿ ಹಾಗೂ ಪಲ್ಲವಿ ದಂಪತಿ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.