HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಏಷ್ಯಾದ ಪ್ರಥಮ ನೇಚುರೋಪತಿ ಕಾಲೇಜು ಉಜಿರೆಯಲ್ಲಿ 25ನೇ ವರ್ಷದ ಘಟಿಕೋತ್ಸವ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾ ಸಂಸ್ಥೆಗಳ ಆಡಳಿತಕ್ಕೊಳಪಟ್ಟಿರುವ ಏಷ್ಯಾದ ಮೊದಲ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ(ನೇಚುರೋಪತಿ ಕಾಲೇಜು) ಇದರ 25 ನೇ ವರ್ಷದ ಪದವಿ ಪ್ರಧಾನ ಸಮಾರಂಭ, 130 ರಷ್ಟು ವಿದ್ಯಾರ್ಥಿಗಳಿರುವ ಅತೀ ದೊಡ್ಡ ಬ್ಯಾಚ್‌ನ ಪ್ರದಪ್ರದಾನ ಸಮಾರಂಭ ಜೂ. 11 ರಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಧಾರವಾಡ ಶ್ರೀ ಮಂಜುನಾಥೇಶ್ವರ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು.   ಬೆಂಗಳೂರಿನ ನಿಮ್ಹಾನ್ಸ್ ನಿರ್ದೇಶಕ  ಡಾ| ಬಿ ಎನ್ ಗಂಗಾಧರ್  130 ರಷ್ಟು ವಿದ್ಯಾರ್ಥಿಗಳಿರುವ ಅತೀ ದೊಡ್ಡ ಬ್ಯಾಚ್‌ನ  ಪ್ರದವಿ ಪ್ರದಾನ  ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಹೇಮಾವತಿ ವಿ ಹೆಗ್ಗಡೆ ,  ಎಸ್  ಡಿ ಎಂ  ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ  ಡಾ । ಬಿ.ಯಶೋವರ್ಮ, ಹರ್ಷೇಂದ್ರ  ಕುಮಾರ್ ,  ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ,  ಡಾ. ಸುಜಾತಾ,  ಡಾ. ಶಿವಪ್ರಸಾದ್,   ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.