HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಜೂ. 16: ಕಾಲಭೈರವೇಶ್ವರ ಒಕ್ಕಲಿಗ ಗೌಡರ ಯುವ ವೇದಿಕೆಯಿಂದ ಉಜಿರೆಯಲ್ಲಿ ರಕ್ತದಾನ ಶಿಬಿರ

ಉಜಿರೆ: ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೇವಾ ಸಂಘ ಇದರ ಸಹಕಾರದೊಂದಿಗೆ ಬೆಳ್ತಂಗಡಿ ತಾಲೂಕು ಒಕ್ಕಲಿಗರ ಯುವ ವಿಭಾಗದ ಪ್ರಮುಖ ನೇತೃತ್ವದಲ್ಲಿ ಕಾಲಭೈರವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಜಂಟಿ ಸಹಭಾಗಿತ್ವದೊಂದಿಗೆ ಜೂ. 16 ರಂದು ಎಸ್‌ಪಿ ಆಯಿಲ್ ಬಳಿಯ ಉಜಿರೆ ಬ್ಯಾಂಕ್ ವಠಾರದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸುವ ಬಗ್ಗೆ ಜೂ.9 ರಂದು ಬ್ಯಾಂಕ್ ಹಾಲ್‌ನಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಸಲಾಯಿತು.
ಸಂಘದ ಅಧ್ಯಕ್ಷ ಕೆ ಬಾಲಕೃಷ್ಣ ಗೌಡ ಕೇರಿಮಾರು ಅಧ್ಯಕ್ಷತೆ ವಹಿಸಿ ಸಭೆ ನಡೆಸಿದರು. ಯುವ ವೇದಿಕೆಯ ಅಧ್ಯಕ್ಷ ಸುಧಾಕರ ಗೌಡ ಧರ್ಮಸ್ಥಳ, ಬ್ಯಾಂಕಿನ ನಿರ್ದೇಶಕರಾದ ಜಯಂತ ಗೌಡ ಗುರಿಪಳ್ಳ, ಮತ್ತು ಸರೋಜಿನಿ ವಿಜಯಕುಮಾರ್ ಕಲ್ಲಳಿಕೆ, ಬ್ಯಾಂಕಿ ಸಮಿತಿಗಳಿಗೆ ಮಾಹಿತಿ ರವಾನಿಸಿ ಅತೀ ಹೆಚ್ಚು ರಕ್ತ ಶೇಖರಣೆ ನಡೆಸುವ ಗುರಿ ಹೊಂದಲಾಯಿತು.
ಕಾರ್ಯಕ್ರಮದ ದಿನವೇ ಸಹಕಾರಿ ಬ್ಯಾಂಕ್ ವತಿಯಿಂದ ಕೆಲವು ಹೊಸ ಸ್ವಸಹಾಯ ಸಂಘಗಳನ್ನು ಲೋಕಾರ್ಪಣೆಗೊಳಿಸುವುದೆಂದೂ ತೀರ್ಮಾನಿಸಲಾಯಿತು. ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಲು ಉಪಸಮಿತಿಗಳನ್ನು ರಚಿಸಿ ಜವಾಬ್ಧಾರಿ ಹಂಚಿಕೆ ಮಾಡಲಾಯಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.