ವಿದ್ಯಾಮಾತಾ ಫೌಂಡೇಷನ್‌ನಿಂದ ಗ್ರಾಮೀಣ ಉದ್ಯೋಗ ಮೇಳ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ನಿರುದ್ಯೋಗ ಸಮಸ್ಯೆಯೇ ತಾಲೂಕಿನ ಮೂಲಭೂತ ಬೇಡಿಕೆಗಳಲ್ಲೊಂದಾಗಿದೆ. ನಿರುದ್ಯೋಗಿಗಳಲ್ಲಿ ಬಹುಪಾಲು ಹೆಣ್ಣು ಮಕ್ಕಳೇ ಇದ್ದು ಅವರಿಗೆ ಊರಿನಲ್ಲೇ ಇದ್ದು ನಿತ್ಯ ಮನೆಗೆ ಹೋಗುವ ರೀತಿಯ ಉದ್ಯೋಗಾವಕಾಶಗಳು ಬೇಕಾಗಿದೆ. ಅದಕ್ಕಾಗಿ ಗಾರ್ಮೆಂಟ್ ಫ್ಯಾಕ್ಟರಿ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ವಿದ್ಯಾಮಾತಾ ಫೌಂಡೇಷನ್‌ನವರು ಐಟಿ ಕ್ಷೇತ್ರದ ಉದ್ಯೋಗವನ್ನು ತಾಲೂಕಿಗೆ ತರುವುದಾದರೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ಉದ್ಯೋಗಾನ್ವೇಷಣೆಯಲ್ಲಿರುವ ಯುವ ಸಮುದಾಯಕ್ಕೆ ಸಹಾಯವಾಗುವ ದೃಷ್ಟಿಯಲ್ಲಿ ಶ್ರೀ ವಿದ್ಯಾಮಾತಾ ಫೌಂಡೇಷನ್ ಪಿಂಟೋ ಕಾಂಪ್ಲೆಕ್ಸ್ ಬೆಳ್ತಂಗಡಿ ಇವರ ವತಿಯಿಂದ ಜೂ. 9 ರಂದು ಇಲ್ಲಿನ ಮಾದರಿ ಶಾಲಾ ವಠಾರದಲ್ಲಿ ಆಯೋಜಿಸಿದ್ದ ಉಚಿತ ಪ್ರವೇಶದ ಗ್ರಾಮೀಣ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು, ಯುವಜನತೆ ಸಂಬಳದ ದೃಷ್ಟಿಯಿಂದ ಮಾತ್ರ ಉದ್ಯೋಗವನ್ನು ಅಳೆಯದೆ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಪುತ್ತೂರಿನಲ್ಲಿ ಈ ಸಂಸ್ಥೆ ರಾಜ್ಯಮಟ್ಟದ ಉದ್ಯೋಗ ಮೇಳ ಆಯೋಜಿಸಿ ೩೫೦೦ ಮಂದಿಗೆ ಉದ್ಯೋಗ ನೇಮಕಾತಿ ಕೊಡಿಸಿದೆ. ಬೆಳ್ತಂಗಡಿ ತಾಲೂಕಿನವರಿಗೂ ಇಂದು ಈ ಮೇಳ ವರದಾನವಾಗದಲಿದೆ ಎಂದರು.
ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ, ಈ ಸಂಸ್ಥೆಯ ಕಚೇರಿ ಉದ್ಘಾಟನೆ ವೇಳೆ ನಾನು ಕೇಳಿಕೊಂಡ ಮೇರೆಗೆ ಈ ಸಂಸ್ಥೆ ಉದ್ಯೋಗ ಮೇಳಗಳ ಆಯೋಜನೆಗೆ ಚಾಲನೆ ನೀಡಿದೆ. ಇದು ಉತ್ತಮ ಬೆಳವಣಿಗೆ, ಮುಂದಕ್ಕೆ ದೊಡ್ಡ ಮಟ್ಟಕ್ಕೆ ವಿಸ್ತರಣೆಯಾಗಲಿ ಎಂದರು.
ಸಮಾರಂಭದಲ್ಲಿ ಜಯಕರ್ನಾಟಕ ರಾಜ್ಯ ಸಂ. ಕಾರ್ಯದರ್ಶಿ ಸುರೇಂದ್ರನಾಥ ಆಳ್ವ, ಬಂಟ್ವಾಳ ಘಟಕದ ಅಧ್ಯಕ್ಷ ಪ್ರಮೋದ್ ಶೆಟ್ಟಿ, ತರಬೇತುದಾರ ಪೃಥ್ವಿ ಅಯ್ಯಪ್ಪ, ಜಯಕರ್ನಾಟಕ ಸಂಘಟನೆಯ ತಾ| ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಲಾಲ ಗ್ರಾ.ಪಂ ಸದಸ್ಯ ಮೋಹನ್‌ದಾಸ್ ಭೈರ, ಪ್ರಮುಖರಾದ ಮನೋಹರ್ ಮೊದಲಾದವರು ಭಾಗಿಯಾಗಿದ್ದರು.
ವಿದ್ಯಾಮಾತಾ ಫೌಂಡೇಷನ್ ಅಧ್ಯಕ್ಷ ಭಾಗ್ಯೇಶ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಸಂಘಟನೆಯ ಸಂಚಾಲಕರಾಗ ಅಕ್ಷತ್ ಮತ್ತು ಸಂಪತ್, ಸಂಘಟನಾ ಕಾರ್ಯದರ್ಶಿ ರೂಪೇಶ್ ರೈ, ಸಹಾಯಕ ಸುಹೈಲ್ ಅಹಮ್ಮದ್, ಕಚೇರಿ ಸಿಬ್ಬಂದಿ ಅಪರ್ಣ, ತುಳಸಿ, ಹರ್ಷಿತಾ ಸಹಕಾರ ನೀಡಿದರು.
ಇದೇ ಸಂದರ್ಭ ಫೌಂಡೇಷನ್ ವತಿಯಿಂದ ಒಂದನೇ ತರಗತಿ ಮತ್ತು ಆಂಗ್ಲ ಮಾಧ್ಯಮ ಎಲ್‌ಕೆಜಿಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಿಸಲಾಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.