ವಿದ್ಯಾರ್ಥಿನಿ ಅಂಜನಾ ಬರ್ಬರ ಹತ್ಯೆ: ಪ್ರಮುಖ ಆರೋಪಿ ಬಂಧನ

ಅಂಜನಾ ವಶಿಷ್ಠ

ಆರೋಪಿ ಸಂದೀಪ್ ರಾಥೋಡ್

ಬೆಳ್ತಂಗಡಿ: ಇಲ್ಲಿಯ ಉಜಿರೆ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ, ಚಿಕ್ಕಮಗಳೂರು ಜಿಲ್ಲೆಯ ನಿವಾಸಿ ಅಂಜನಾ ವಶಿಷ್ಠ ರವರನ್ನು ಜೂ.7 ರಂದು ಮಂಗಳೂರಿನ ಅತ್ತಾವರದ ಬಾಡಿಗೆ ಕೊಠಡಿಯೊಂದರಲ್ಲಿ ಬರ್ಬರವಾಗಿ ಹತ್ಯೆಗಯ್ಯಲಾಗಿದ್ದು, ಕೊಲೆ ಪ್ರಮುಖ ಆರೋಪಿ ಸಂದೀಪ್ ರಾಥೋಡ್ ರವರನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಸಂದೀಪ್ ರಾಥೋಡ್ ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕು ನಿವಾಸಿಯಾಗಿದ್ದು, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಗೆ ತರಬೇತಿ ಪಡೆಯಲು ಮಂಗಳೂರಿಗೆ ಆಗಮಿಸಿದ್ದರು. ವಿದ್ಯಾರ್ಥಿನಿ ಅಂಜನಾರವರು ಉಜಿರೆಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಎಂಎಸ್ಸಿ ವ್ಯಾಸಾಂಗ ಮುಗಿಸಿದ್ದು, ಬ್ಯಾಂಕಿಂಗ್ ಪರೀಕ್ಷೆ ಬರೆಯುವರೇ ತರಬೇತಿ ಪಡೆಯಲು ಮಂಗಳೂರಿಗೆ ಆಗಮಿಸಿದ್ದರು.
ಘಟನೆಯ ದಿನ ಅಂಜನಾ ರವರು, ನಾವಿಬ್ಬರೂ ವಿವಾಹವಾಗಿದ್ದು, ಸಂದೀಪ್ ರಿಗೆ ಚಪಾತಿ ನೀಡುವುದಿದೆ ಎಂದು ಮನೆಯ ಮಾಲೀಕರಿಗೆ ತಿಳಿಸಿ ಕೊಠಡಿಗೆ ತೆರಳಿದ್ದರು.
ಇದಾದ ನಂತರ ಬಾಡಿಗೆ ರೂಮ್‌ನಲ್ಲಿ ಜೂ.8ರಂದು ಬೆಳಿಗ್ಗೆ ಅಂಜನಾರವರ ಕುತ್ತಿಗೆಯು ಮಂಚದ ಸರಳಿನೆಡೆಯಲ್ಲಿ ನುಗ್ಗಿಸಿ, ಟಿವಿ ಕೇಬಲ್‌ನಿಂದ ಕತ್ತು ಬಿಗಿದು ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಆರೋಪಿ ಸಂದೀಪ್ ಪರಾರಿಯಾಗಿದ್ದರು. ಪ್ರಕರಣದ ತನಿಖೆಗೆ ಕೈಗೆತ್ತಿಕೊಂಡ ಮಂಗಳೂರು ಪೊಲೀಸರು ಘಟನೆ ನಡೆದ 24 ಗಂಟೆಯ ಒಳಗೆ ಆರೋಪಿ ಸಂದೀಪ್ ರನ್ನು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನಷ್ಟೇ ತನಿಖೆಯಿಂದ ತಿಳಿಯಬೇಕಾಗಿದೆ

.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.