ಶಿಬಾಜೆ: ಮೈಗೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ

ಶಿಬಾಜೆ: ಇಲ್ಲಿಯ ಶಿಬಾಜೆ ಪೆರ್ಲಶಾಲೆ ಬಳಿಯ ನಿವಾಸಿ ಅಶ್ವಥ ಗೌಡ (35.ವ)ರವರು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.8ರಂದು ವರದಿಯಾಗಿದೆ.
ವಿಪರೀತ ಕುಡಿತದ ಚಟ ಬೆಳೆಸಿಕೊಂಡಿದ್ದ ಅಶ್ವಥ ಗೌಡರವರ ಸ್ವಭಾವ ವಿರೋಧಿಸಿ ಪತ್ನಿ ಮತ್ತು ಮಕ್ಕಳು ವರ್ಷದ ಹಿಂದೆಯೇ ಪರಿತ್ಯಕ್ತರಾಗಿದ್ದರು. ಬಳಿಕ ಇವರು ತಂದೆ ಮನೆಯ ಸ್ವಲ್ಪ ದೂರದಲ್ಲೇ ಬೇರೆ ಮನೆ ಮಾಡಿ ಪ್ರತ್ಯೇಕವಾಗಿ ವಾಸವಾಗಿದ್ದರು.
ಜೂ.೭ರಂದು ರಾತ್ರಿ ಇವರು ಈ ಕೃತ್ಯವೆಸಗಿರುವ ಸಾಧ್ಯತೆ ಇದ್ದು, ಬೆಳಿಗ್ಗೆ ಅಕ್ಕಪಕ್ಕದ ನಿವಾಸಿಗಳಿಗೆ ಸಂಶಯ ಬಂದ ಹಿನ್ನೆಲೆಯಲ್ಲಿ, ಬಂದು ನೋಡುವಾಗ ಅವರು ಮನೆಯೊಳಗೆ ಮೈಗೆ ಬೆಂಕಿಹಚ್ಚಿ ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.