ಉಜಿರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರುಮೌಲ್ಯ ಮಾಪನದಲ್ಲಿ ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ (ರಾಜ್ಯ ಪಠ್ಯಕ್ರಮ) ವಿದ್ಯಾರ್ಥಿ ವಿಕ್ರಮ್ ಶೆಟ್ಟಿ ಯವರು ಹಿಂದಿಯಲ್ಲಿ 100ರಲ್ಲಿ 100 ಅಂಕಗಳಿಸಿರುತ್ತಾರೆ . ಇವರು ಒಟ್ಟು 625 ಅಂಕಗಳಲ್ಲಿ 622 ಅಂಕ ಪಡೆದು ಬೆಳ್ತಂಗಡಿ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ ನಾಲ್ಕನೆ ಸ್ಥಾನ ಪಡೆದಿರುತ್ತಾರೆ .
ಇವರು ಕನ್ಯಾಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವೀರಣ್ಣ ಶೆಟ್ಟಿ ಹಾಗೂ ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಅಮೃತಾ ವಿ. ಶೆಟ್ಟಿ ದಂಪತಿಪುತ್ರ
ವಿಕ್ರಮ್ ಪಡೆದ ಅಂಕಗಳು: ಕನ್ನಡ:125. ಇಂಗ್ಲೀಷ್: 99. ಹಿಂದಿ:100. ಗಣಿತ: 100. ವಿಜ್ಞಾನ: 99. ಸಮಾಜ ವಿಜ್ಞಾನ:99. ಒಟ್ಟು ಅಂಕಗಳು: 625ರಲ್ಲಿ622