HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕಣಿಯೂರು: ಶ್ರೀ ನಾಗದೇವರ ನೂತನ ಬಿಂಬದ ಪುನರ್‌ಪ್ರತಿಷ್ಠೆ

 

 

ಕಣಿಯೂರು: ಇಲ್ಲಿಯ ಕಸಬದ ವಿಷ್ಣುನಗರದಲ್ಲಿ ನೂತನವಾಗಿ ಪುನರ್ ನಿರ್ಮಿಸಿದ ನಾಗಾಲಯದಲ್ಲಿ ಶ್ರೀ ನಾಗದೇವರ ನೂತನ ಬಿಂಬದ ಪುನರ್ ಪ್ರತಿಷ್ಠೆ ಹಾಗೂ ಆಶ್ಲೇಷ ಬಲಿ ಪೂಜಾ ಕಾರ್ಯಕ್ರಮವು ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಕೆ.ಎಂ ಸುಬ್ರಹ್ಮಣ್ಯ ಮುಚ್ಚಿನ್ನಾಯರ ವೈದಿಕ ನೇತೃತ್ವದಲ್ಲಿ ಜೂ.7 ರಂದು ಜರುಗಿತು.
ಬೆಳಿಗ್ಗೆ ಗಣಪತಿಹೋಮ, ಪಂಚವಿಂಶತಿ ಕಲಶಾರಾಧನೆ, ಕಲಶಪ್ರಧಾನ ಹೋಮ, ಪವಮಾನ ಹೋಮ, ತಿಲಹೋಮ, ಕೂಷ್ಮಂಡ ಹೋಮ, ನವಗ್ರಹ ಹೋಮ ನಡೆದು, ನಂತರ ನೂತನ ಬಿಂಬಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಆಶ್ಲೇಷ ಬಲಿ ಪೂಜೆ ಜರುಗಿತು. ಮದ್ಯಾಹ್ನ 12.00 ಗಂಟೆಗೆ ಪಂಚಾಮೃತ ಅಭಿಷೇಕ, ಪಂಚ ವಿಂಶತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ಪೇಜಾವರ ಅದೋಕ್ಷಜ ಮಠದ ಶ್ರೀಗಳಾದ ವಿಶ್ವೇಶತೀರ್ಥ ಪಾದಂಗಳವರು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುನೀಲ್ ಕುಮಾರ್ ಕೆ.ಎಸ್, ಗ್ರಾಮದ ಪ್ರಮುಖ ಗಣ್ಯರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀ ದೇವರ ಕೃಪೆಗೆ ಪಾತ್ರರಾದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.