ತಾಲೂಕಿನಾದ್ಯಂತ ಈದುಲ್ ಪಿತರ್ ಹಬ್ಬ ಆಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಾಚಾರ್‌ನಲ್ಲಿ ಈದ್ ಉಲ್ ಫಿತರ್ ಹಾಗೂ ಬೀಳ್ಕೊಡುಗೆ
ಉಜಿರೆ: ಮೊಹಿಯುದ್ದಿನ್ ಜುಮಾ ಮಸೀದಿ ಮಾಚಾರ್ ಮಹಮ್ಮದ್ ವಲಿಯುಲ್ಲಾಹಿ ದರ್ಗಾ ಶರೀಫ್‌ನಲ್ಲಿ ಸಂಭ್ರ್ರಮ ಸಡಗರದಿಂದ ಜಮಾತರೆಲ್ಲರೂ ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಈದುಲ್‌ಫಿತರ್ ಹಬ್ಬವನ್ನು ಆಚರಿಸಿದರು.
ಪವಿತ್ರ ರಂಝಾನ್‌ನಲ್ಲಿ ಒಂದು ತಿಂಗಳು ವೃತವನ್ನು ಆಚರಿಸಿ ಕೆಡುಕು ಮುಕ್ತವಾದಂತೆ ಜೀವನದ ಉದ್ದಕ್ಕೂ ಅಳವಡಿಸಿಕೊಂಡು ಅಲ್ಲಾಹನ ಸಂಪ್ರೀತಿಗಳಿಸುವಂತಾಗಲಿ ಈದ್ ಎಂದು ಖತೀಬ್ ಅಬ್ದುರಹ್ಮಾನ್ ಸಖಾಫಿ ಖುತ್ಬಾ, ನಮಾಜ್‌ಗೆ ನೇತೃತ್ವ ನೀಡಿ ಕರೆ ನೀಡಿದರು.
ಗೌರವ ಅಧ್ಯಕ್ಷ ಹಂಝ ಬಿ ಎ, ಕೋಶಾಧಿಕಾರಿ ಅಬ್ದುಲ್ ರಝಾಕ್ ಚೆಕ್ಕೆದಡಿ, ಪ್ರ.ಕಾರ್ಯದರ್ಶಿ ಇಕ್ಬಾಲ್ ಮಾಚಾರ್, ಉಪಾಧ್ಯಕ್ಷ ಸಲೀಂ ಅಂಗಡಿ, ಕಾರ್ಯದರ್ಶಿ ಶರೀಫ್ ಬೆದ್ರಳಿಕೆ, ಎಸ್‌ಎಸ್‌ಎಫ್ ಅಧ್ಯಕ್ಷ ಅಬ್ದುಲ್ ಸಲಾಂ ಅಂಗಡಿ, ಉಪಾಧ್ಯಕ್ಷ ಅನ್ಸಾರ್ ಕಿಲೊ ಬಝಾರ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಎಸ್‌ಎಫ್ ಕಾರ್ಯಕರ್ತರು, ಜಮಾತರು ಉಪಸ್ಥಿತರಿದ್ದರು.
ತೀರ್ಥಹಳ್ಳಿ ಸರಕಾರಿ ಕಾಲೇಜು ಮನಶಾಸ್ತ್ರ ಉಪನ್ಯಾಸಕ ಮಹಮ್ಮದ್ ಇಕ್ಬಾಲ್ ಮಾಸ್ಟರ್ ಬದ್ರಿಯಾ ಕಾರ್ಯಕ್ರಮ ನಿರೂಪಿಸಿದರು.

ಸವಣಾಲು ಬದ್ರಿಯಾ ಜುಮಾ ಮಸೀದಿ: ಈದ್ ಉಲ್‌ಫಿತರ್ ಹಬ್ಬ ಆಚರಣೆ
ಸವಣಾಲು: ವಿಶ್ವದಾದ್ಯಂತ ಇಸ್ಲಾಂ ಧರ್ಮದ ಪವಿತ್ರ ಮಾಸವಾದ ರಂಝಾನ್ ತಿಂಗಳಲ್ಲಿ 30 ದಿನಗಳ ಉಪವಾಸ ವೃತದೊಂದಿಗೆ ವಿಶ್ವದಾದ್ಯಂತ ಒಂದು ತಿಂಗಳು ಉಪವಾಸ ಧಾರ್ಮಿಕ ಪ್ರಾರ್ಥನೆಗಳೊಂದಿಗೆ ಸಂಭ್ರಮಿಸಿ ಜೂ.5ರಂದು ವಿಜೃಂಭಣೆಯ ಈದ್ ಹಬ್ಬವನ್ನು ಸವಣಾಲು ಬದ್ರಿಯಾ ಜುಮಾ ಮಸೀದಿಯ ಎಲ್ಲಾ ಕುಟುಂಬ ಸದಸ್ಯರು ಒಂದಾಗಿ ಒಗ್ಗಟ್ಟಾಗಿ ಆಚರಿಸಿದರು.
ಈದ್ ಪ್ರಯುಕ್ತ ಮಸೀದಿಯ ಮುಖ್ಯ ಧರ್ಮಗುರುಗಳು ಮಳೆಗಾಗಿ ವಿಶೇಷ ಪ್ರಾರ್ಥನೆಯನ್ನು ಮಾಡಿದರು ಹಾಗೂ ಜಮಾಅತ್ ಎಲ್ಲ್ಲರಿಗೂ ಈ ಹಬ್ಬ ದೇಶದ ಐಕ್ಯತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿ ಮತ್ತು ಎಲ್ಲರಿಗೂ ಸಮೃದ್ಧಿ ಮತ್ತು ಉತ್ತಮ ಆರೋಗ್ಯ ದೊರೆಯಲಿ, ದೇವರು ನಮ್ಮೆಲ್ಲರಲ್ಲಿಯೂ ಶಾಂತಿ ಮತ್ತು ಸಹಿಷ್ಣುತೆ ನೆಲೆಸುವಂತೆ ಆಶೀರ್ವದಿಸಲಿ ಎಂದು ಪ್ರಾರ್ಥಿಸಿ ವಿಶೇಷ ಉಪನ್ಯಾಸವನ್ನು ನೀಡಿದರು.

ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸೀದಿ :ಈದುಲ್‌ಫಿತರ್ ಆಚರಣೆ
ಮುಂಡಾಜೆ: ಇಲ್ಲಿಯ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್‌ನಲ್ಲಿ ಈದುಲ್‌ಫಿತರ್ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಯ್ಯಿದ್ ಕೂರತ್ ತಂಙಳ್ ಮಾರ್ಗದರ್ಶನದಲ್ಲಿ, ಎಸ್ಸೆಸ್ಸೆಫ್ ನೇತೃತ್ವದಲ್ಲಿ ನಡೆಯುತ್ತಿರುವ ಧಾರ್ಮಿಕ ಮಹಾಅಭಿಯಾನ ನಿರತರಿಗೆ ಆರ್ಥಿಕ ಧನಸಹಾಯ ಇಹ್ಸಾನ್ ಫಂಡ್ ಸಂಗ್ರಹಿಸುವ ಮೂಲಕ ಹಬ್ಬ ಆಚರಿಸಲಾಯಿತು.
ಖತೀಬ್ ಇಬ್ರಾಹಿಂ ಸಖಾಫಿ ಕಬಕ, ಸಿದ್ದೀಕ್ ಹಿಮಮಿ ಸುಳ್ಯ, ಜಮಾಅತ್ ಅಧ್ಯಕ್ಷ ಅಬ್ದುಲ್ಲ ರೋಝ, ಕಾರ್ಯದರ್ಶಿ ರಮ್ಲ ನೆಕ್ಕರೆ, ಪ್ರಮುಖರಾದ ಅಶ್ರಫ್ ಆಲಿಕುಂಞಿ, ಉಸ್ಮಾನ್ ಕೂಳೂರು, ಅಬೂಬಕ್ಕರ್, ಅಯ್ಯೂಬ್ ಆಲಿಕುಂಞಿ, ಹಕಿಂ, ಉಮರ್ ಸಖಾಫಿ ಕೂಳೂರು, ಹಮೀದ್ ದರ್ಖಾಸ್, ಇಸ್ಮಾಯಿಲ್ ದರ್ಖಾಸ್, ಅಬ್ಬಾಸ್,ಮುಹಮ್ಮದ್ ಜೈ ಭಾರತ್, ಫಾರೂಕ್ ನೆಕ್ಕರೆ, ಹಮೀದ್ ನೆಕ್ಕರೆ, ಶಬೀರ್ ಬಿ.ಕೆ.ಎಚ್, ಇಬ್ರಾಹಿಂ ಕನ್ಯಾಡಿ, ಸಿದ್ದೀಕ್,ಸುಹಾನ್, ಮೊದಲಾದವರು ಉಪಸ್ಥಿತರಿದ್ದರು. ಈದುಲ್ ಫಿತರ್ ನಮಾಝ್ ನೇತೃತ್ವವನ್ನು ಇಬ್ರಾಹಿಂ ಸಖಾಫಿ ಕಬಕ ವಹಿಸಿದ್ದರು.

ಸಸಿನೆಟ್ಟು ಈದುಲ್‌ಫಿತರ್ ಹಬ್ಬ ಆಚರಣೆ
ಉಜಿರೆ: ಸುನ್ನೀಮೆನೇಜ್ ಮೆಂಟ್ ಅಸೋಸಿಯೇಷನ್ ಉಜಿರೆ ರೀಜಿನಲ್ ಸಮಿತಿ ಅಧ್ಯಕ್ಷ ಹಮೀದ್ ನೆಕ್ಕರೆ ಅವರು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಮೂಲಕ ಈದುಲ್ ಫಿತರ್ ಹಬ್ಬ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಎಸ್‌ಎಮ್‌ಎ ಪುತ್ತೂರು ಸಂಘಟನಾ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ, ಯಂಗ್ ಚಾಲೆಂಜರ್ಸ್ ಕ್ರೀಡಾ ಕಾರ್ಯದರ್ಶಿ ಬಶೀರ್ ಮಂಗಳೂರು, ಎಸ್ಸೆಸ್ಸೆಫ್ ಶಾಖೆ ಅಧ್ಯಕ್ಷ ಸಿದ್ದೀಕ್, ನೌಶಾದ್, ಅಬೂಬಕ್ಕರ್ ಕೂಳೂರು, ಧರ್ಮಗುರುಗಳಾದ ಸಿದ್ದೀಕ್ ಹಿಮಮಿ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.