ಚಾರ್ಮಾಡಿ: ಹಲವಾರು ದಿನಗಳಿಂದ ಹದೆಗೆಟ್ಟಿರುವ ಗಾಂಧಿನಗರ (ಕಕ್ಕಿಂಜೆ) ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸುವಂತೆ ಹಾಗೂ ಮಳೆಗಾಲದ ಮುಂಚಿತವಾಗಿ ಸಾರ್ವಜನಿಕರಿಗೂ ಶಾಲಾ ಕಾಲೇಜು ಹೋಗುವ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ದುರಸ್ತಿ ಗೊಳಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ಚಾರ್ಮಾಡಿ ಗ್ರಾಮ ಪಂಚಾಯತ್ ಗೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜ ಹಾಗೂ ಪಿ.ಡಿ.ಓ ಪ್ರಕಾಶ್ ಶೆಟ್ಟಿ ಯವರು ಆದಷ್ಟು ಬೇಗ ರಸ್ತೆಯನ್ನು ದುರಸ್ತಿಗೊಳಿಸುವುದಾಗಿ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ SDPI ಚಾರ್ಮಾಡಿ ವಯದ ಅಧ್ಯಕ್ಷರಾದ ರಹೀಂ ಬೀಟಿಗೆ ಪಂಚಾಯತ್ ಸದಸ್ಯರಾದ ಸಿದ್ದೀಕ್ ಯು.ಪಿ ಹಾಗೂ SDPI ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು