ಅಕ್ಕಿ ದುರುಪಯೋಗ ತಡೆಗೆ ಆಹಾರ ಸುರಕ್ಷಾ ಮಾಹೆ: ಪಡಿತರದಾರರಿಗೆ ಇ-ಕೆವೈಸಿ ಸಲ್ಲಿಕೆ ಕಡ್ಡಾಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಎರಡು ತಿಂಗಳ ಕಾಲಾವಕಾಶ ಸಲ್ಲಿಕೆಯಾಗದಿದ್ದಲ್ಲಿ ಪಡಿತರ ಸ್ಥಗಿತ

ಬೆಳ್ತಂಗಡಿ: ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಪಡಿತರ ಅಕ್ಕಿ ದುರುಪಯೋಗ ತಡೆಗೆ ರಾಜ್ಯದಲ್ಲಿ ಆಹಾರ ಸುರಕ್ಷಾ ಮಾಹೆ ಎಂಬ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಇದರಲ್ಲಿ ಪ್ರತಿ ಪಡಿತರ ಚೀಟಿಗಳನ್ನು ಪರಿಶೀಲಿಸಿ, ಕಾರ್ಡಿನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ( ಆಧಾರ್ ದೃಢೀಕರಣ)ವನ್ನು ಅಪ್‌ಡೇಟ್ ಮಾಡುವ ಯೋಜನೆ ರೂಪಿಸಿದೆ.
ಬೆಳ್ತಂಗಡಿ ಸೇರಿದಂತೆ ದ.ಕ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಸಹಕಾರ ಸಂಘಗಳ ಮೂಲಕ ನ್ಯಾಯಬೆಲೆ ಅಂಗಡಿಗಳಿದ್ದು, ಇಲ್ಲಿಯೇ ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳಿಗೆ ಪ್ರತಿ ತಿಂಗಳ ಪಡಿತರ ವಿತರಣೆಯಾಗುತ್ತಿದೆ. ಈ ಪಡಿತರ ಕಾರ್ಡುಗಳಲ್ಲಿರುವ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಈ ಹಿಂದೆಯೇ ಲಿಂಕ್ ಮಾಡಲಾಗಿದೆ. ಆದರೆ ಇದನ್ನು ದೃಢೀಕರಣ ಮಾಡಿಲ್ಲ. ಇದೀಗ ಇದನ್ನು ದೃಢೀಕರಿಸುವ (ಇ-ಕೆವೈಸಿ) ಜವಾಬ್ದಾರಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಿಗೆ ನೀಡಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರು ಆದೇಶ ನೀಡಿದ್ದಾರೆ.
ಪಡಿತರ ಅಂಗಡಿಯಲ್ಲೇ ಅಪ್‌ಡೇಟ್:
ರಾಜ್ಯ ಸರಕಾರವು 2018-19ನೇ ಸಾಲಿನ ಆಯವ್ಯಯದಲ್ಲಿ ಆಹಾರ ಸುರಕ್ಷಾ ಮಾಹೆ ಎಂಬ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಇದರಲ್ಲಿ ಪ್ರತಿ ಪಡಿತರ ಚೀಟಿಗಳನ್ನು ಪರಿಶೀಲಿಸಿ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದು ಪಡಿಸಲು ಹಾಗೂ ಅರ್ಹ ಪಡಿತರ ಚೀಟಿದಾರರನ್ನು ಗುರುತಿಸಿ ಪಡಿತರ ಚೀಟಿಯನ್ನು ನೀಡಲಾಗುವುದು.
ಪಡಿತರ ಚೀಟಿದಾರರು ತಾವು ಪಡಿತರ ಸಾಮಾಗ್ರಿ ಪಡೆಯುತ್ತಿರುವ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿಯೇ ಇ-ಕೆವೈಸಿ ಅಪ್‌ಡೇಟ್ ಮಾಡಬೇಕಾಗಿದೆ.
ಎಸ್.ಸಿ, ಎಸ್.ಟಿಯವರಿಗೆ ಜಾತಿ ಪ್ರಮಾಣಪತ್ರ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಇ-ಕೆವೈಸಿ ಅಪ್‌ಲೋಡ್ ಮಾಡಲು ನ್ಯಾಯಬೆಲೆ ಅಂಗಡಿಗಳಿಗೆ ಬರುವಾಗ ಕುಟುಂಬದ ಓರ್ವ ಸದಸ್ಯರು ಜಾತಿ ಪ್ರಮಾಣ ಪತ್ರ ತರಬೇಕು. ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳು ಈ ಜಾತಿ ಪ್ರಮಾಣ ಪತ್ರದ ಸಂಖ್ಯೆ ನಮೂದಿಸಿ ತಮ್ಮ ಲಾಗಿನ್‌ನಲ್ಲಿಯೇ ಪರಿಶೀಲಿಸಿ ಇತರ ವಿವರಗಳೊಂದಿಗೆ ನಮೂದು ಮಾಡಬೇಕು.
ಕುಟುಂಬದ ಮುಖ್ಯಸ್ಥೆ ಮಹಿಳೆ:
ಇ-ಕೆವೈಸಿಯಲ್ಲಿ ಮಾಹಿತಿ ಅಪ್‌ಲೋಡ್ ಮಾಡುವಾಗ ಪಡಿತರ ಚೀಟಿದಾರ ಕುಟುಂಬದ ಹಿರಿಯ ಮಹಿಳಾ ಸದಸ್ಯರನ್ನು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಬೇಕು. ಹೊಸದಾಗಿ ಪಡಿತರ ಚೀಟಿ ಮಾಡಿಸಿಕೊಂಡವರಿಗೆ ಮಹಿಳಾ ಸದಸ್ಯರನ್ನೇ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಆದರೆ ಹಳೆಯ ಪಡಿತರ ಚೀಟಿಯಲ್ಲಿ ಪುರುಷರೇ ಮುಖ್ಯಸ್ಥ ಎಂದು ಗುರುತಿಸಿದ್ದು, ಅದನ್ನೀಗ ಕುಟುಂಬದ ಹಿರಿಯ ಮಹಿಳಾ ಸದಸ್ಯರಿಗೆ ವರ್ಗಾಯಿಸಬೇಕಿದೆ.
ಎಂಡೋ ಪೀಡಿತರಿಗೆ ವಿನಾಯಿತಿ: ವಯೋವೃದ್ಧರು, ಕುಷ್ಠರೋಗಿ, ಎಂಡೋಸಲ್ಫಾನ್ ಪೀಡಿತರು, ವಿಕಲಚೇತನರಿಗೆ, ಅಸೌಖ್ಯದಲ್ಲಿರುವವರಿಗೆ ಕೆವೈಸಿ ಅಪ್‌ಲೋಡು ಮಾಡುವುದರಿಂದ ವಿನಾಯತಿಯನ್ನು ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿಯೇ ನೀಡಬಹುದಾಗಿದೆ ಆದರೆ ವಿನಾಯಿತಿಗೆ ಸಂಬಂಧಪಟ್ಟ ದಾಖಲೆಯನ್ನು ನ್ಯಾಯಬೆಲೆ ಅಂಗಡಿಯವರು ಪಡೆದುಕೊಂಡು ಇಟ್ಟುಕೊಳ್ಳಬೇಕು.

ಜೂ.೧ರಿಂದ ಪ್ರಕ್ರಿಯೆ ಆರಂಭ:
ಆಧಾರ್ ದೃಢೀಕರಣ (ಇ-ಕೆವೈಸಿ) ಅಪ್‌ಲೋಡ್ ಮಾಡುವ ಕಾರ್ಯ ಕ್ರಮವು ಜೂ.೧ರಿಂದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆರಂಭಗೊಂಡಿದೆ. ದೃಢೀಕರಣ ಕಾರ್ಯಕ್ಕೆ ೨ ತಿಂಗಳ ಕಾಲಾವಕಾಶ ನೀಡಲಾಗಿದ್ದು, ಜು.31ಕ್ಕೆ ಅಂತ್ಯಗೊಳ್ಳಲಿದೆ. ಹಾಗಾಗಿ ಎಲ್ಲಾ ಪಡಿತರದಾರರು ನಿಗದಿತ ದಿನಗಳೊಳಗೆ ಇ-ಕೆವೈಸಿ ಅಪ್‌ಡೇಟ್ ಮಾಡಬೇಕಾಗಿದೆ.

ಇ-ಕೆವೈಸಿ ಎಂದರೆ…
ಆಹಾರ ಇಲಾಖೆಯು ಪಡಿತರ ಚೀಟಿಯಲ್ಲಿರುವ ನೈಜ ಫಲಾನುಭವಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಇ-ಕೆವೈಸಿ ಎಂಬ ಹೊಸ ನಿಯಮವನ್ನು ಕಡ್ಡಾಯಗೊಳಿಸಿದೆ. ಈ ನಿಯಮದಂತೆ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಕುಟುಂಬ ಸದಸ್ಯರೆಲ್ಲರೂ ತಮ್ಮ ಇರುವಿಕೆಯನ್ನು ಇ-ಕೆವೈಸಿ ಮೂಲಕ ದೃಢೀಕರಿಸಿ ಕೊಳ್ಳಬೇಕಾಗಿದೆ. ಅದಕ್ಕಾಗಿ ಆಹಾರ ಇಲಾಖೆಯು ಈಗಾಗಲೇ ಎಸ್.ಐ.ಸಿ ಮೂಲಕ ದತ್ತಾಂಶ ಸಿದ್ಧಪಡಿಸುತ್ತಿದ್ದು, ಇದರಲ್ಲಿ ಇ-ಕೆವೈಸಿ ಮೂಲಕ ಪಡಿತರ ಚೀಟಿದಾರರೂ ತಮ್ಮ ಬೆರಳಚ್ಚು ಗುರುತು (ಆಧಾರ್‌ಗೆ ಸರಿ ಹೊಂದುವ) ನೀಡಬೇಕಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.