HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಜೂ.8 ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಬೆಳ್ತಂಗಡಿಗೆ

ಬೆಳ್ತಂಗಡಿ: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ವಿಶ್ವನಾಥ ಶೆಟ್ಟಿ ಅವರು ಜೂ.8 ರಂದು ಬೆಳ್ತಂಗಡಿಗೆ ಭೇಟಿ ನೀಡಲಿದ್ದಾರೆ ಬೆಳಗ್ಗೆ 9.45 ಕ್ಕೆ ಬೆಳ್ತಂಗಡಿ ಪ್ರವಾಸಿ ಮಂದಿರಕ್ಕೆ ಆಗಮಿಸಲಿರುವ ಅವರು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆತನಕ ಬೆಳ್ತಂಗಡಿಯ ಬಿ.ಸಿ.ಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್‌ಗಳು, ಶ್ರೀ ದೇವರಾಜ ಅರಸು ಹಾಸ್ಟೇಲ್, ಅಂಗನವಾಡಿಗಳು ಹಾಗೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಮಧ್ಯಾಹ್ನ 2.30 ಕ್ಕೆ ಅಳದಂಗಡಿ ಅರಮನೆಗೆ ಲೋಕಾಯುಕ್ತರು ಭೇಟಿ ನೀಡಲಿದ್ದಾರೆ. 2.45ರವರೆಗೆ ಅಲ್ಲಿದ್ದು, ನಂತರ 3 ರಿಂದ 5.30 ರವರೆಗೆ ಅಳದಂಗಡಿ ಶ್ರೀ ಸತ್ಯದೇವತಾ(ಕಲ್ಲುರ್ಟಿ) ದೈವಸ್ಥಾನದ ವತಿಯಿಂದ ನಡೆಯಲಿರುವ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಭಾರತೀಯ ಸೇನಾ ಯೋಧರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಅವರು ಬಜಪೆ ವಿಮಾನ ನಿಲ್ದಾಣಕ್ತರಳಿ ಬೆಂಗಳೂರಿಗೆ ತೆರಳಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.