ಉಜಿರೆ ಯುವವಾಹಿನಿ ಸಂಚಲನಾ ಸಮಿತಿಯಿಂದ ಗುರುಪೂಜೆ, ಸತ್ಯನಾರಾಯಣ ಪೂಜೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಸಮಾಜದ ಉದ್ಧಾರಕ್ಕಾಗಿ ಜನ್ಮತಾಳಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದುಳಿದ ಮತ್ತು ಶೋಷಿತ ವರ್ಗದವರಿಗೆ ಮಾನವ ರೂಪದಲ್ಲಿ ಬಂದ ದೇವರು ಇವರು ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ ಹೇಳಿದರು.
ಅವರು ಜೂ.5 ರಂದು ಯುವವಾಹಿನಿ ಬೆಳ್ತಂಗಡಿ ಘಟಕದ ಯುವವಾಹಿನಿ ಉಜಿರೆ ಸಂಚಲನ ಸಮಿತಿ ಆಶ್ರಯದಲ್ಲಿ ಎಸ್.ಕೆ ಮೆಮೋರಿಯಲ್ ಹಾಲ್‌ನಲ್ಲಿ ನಡೆದ ಗುರುಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ತತ್ವ ಪ್ರಚಾರದ ಮೂಲಕ ಆಶೀರ್ವಚನ ನೀಡಿದರು.
ನಾರಾಯಣ ಗುರುಗಳು ವಿದ್ಯೆ, ಸಂಘಟನೆಯ ಮೂಲಕ ದೇವರ ಭಕ್ತಿಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಗುರುಗಳ ತತ್ವದಂತೆ ಯಾವುದೇ ಸಮಾರಂಭಗಳನ್ನು ಆಡಂಬರವಿಲ್ಲದೆ ಶ್ರದ್ಧಾ ಭಕ್ತಿಯಿಂದ ಮಾಡಿದಾಗ ನೆಮ್ಮದಿ ಲಭಿಸುವುದು. ಸಮಾಜದ ಏಳಿಗೆಗಾಗಿ ಸಂಘಟನೆಯ ಮೂಲಕ ರಾಜಕೀಯ ಶಕ್ತಿಯನ್ನು ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ವಿಶ್ವಾಸದ ಹೋರಾಟ ಮಾಡಬೇಕು ಎಂದರು.
ಬೆಳ್ತಂಗಡಿ ಶ್ರೀ ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಮಾಜಿ ಶಾಸಕ .ಕೆ ಪ್ರಭಾಕರ ಬಂಗೇರ, ಉಜಿರೆ ಉದ್ಯಮಿ ರವಿಕುಮಾರ್ ಬರಮೇಲು,ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ .ಬಿ ಸುವರ್ಣ, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಸುವರ್ಣ ಕನ್ಯಾಡಿ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಪೂಜಾರಿ, ಮಾಜಿ ಸೈನಿಕ ಉಜಿರೆ.ಎಸ್.ಎನ್.ಡಿ.ಪಿ ಅಧ್ಯಕ್ಷ ಎ.ಕೆ ಶಿವನ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಜಿರೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ನೀಲಯ್ಯ ಪೂಜಾರಿ ಕೊಡೆಕ್ಕಲ್, ಮಂಜುಳಾ ಉಮೇಶ್ ಅತ್ತಾಜೆ, ನಾಗವೇಣಿ, ಮಂಜಪ್ಪ ಪೂಜಾರಿ, ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಶ್ರೀ ನಾರಾಯಣ ಗುರು ತತ್ವ ಪ್ರಚಾರಕ ಎಂ.ಕೆ ಪ್ರಸಾದ್, ಯುವವಾಹಿನಿ ಬೆಳ್ತಂಗಡಿ ಘಟಕದ ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಮಚ್ಚಿನ, ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಹರೀಶ್ ಕುಮಾರ್ ಬರಮೇಲು, ಯುವವಾಹಿನಿ ಕೇಂದ್ರ ಸಮಿತಿಯ ನಾಮ ನಿರ್ದೇಶಿತ ಸದಸ್ಯ ಉಮನಾಥ ಕೋಟ್ಯಾನ್ ಗೌರವ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಉಜಿರೆ ಯುವವಾಹಿನಿ ಸಂಚಲನ ಸಮಿತಿ ಅಧ್ಯಕ್ಷ ಮನೋಜ್ ಕುಂಜರ್ಪ ವಹಿಸಿದ್ದರು. ವಿಶಾಲಾಕ್ಷಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ಉಜಿರೆ ಸಂಚಲನ ಸಮಿತಿ ಕಾರ್ಯದರ್ಶಿ ಸ್ವಾಗತಿಸಿ, ಯುವವಾಹಿನಿ ಬೆಳ್ತಂಗಡಿ ಘಟಕದ ಸದಸ್ಯ ಅಶ್ವತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು| ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

ಸಸಿ ವಿತರಣೆ: ಪರಿಸರದ ದಿನಾಚರಣೆಯಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ಅಂಗವಾಗಿ ಭಾಗವಹಿಸಿದ್ದ ಎಲ್ಲರಿಗೂ ಸಂಘಟನೆ ವತಿಯಿಂದ ಗಿಡ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಮೊದಲು ಗುರುಪೂಜೆ, ಶ್ರೀ ಸತ್ಯನಾರಾಯಣ ಪೂಜೆ ರಘುನಾಥ ಶಾಂತಿಯವರ ನೇತೃತ್ವದಲ್ಲಿ ಜರುಗಿತು. ಉಜಿರೆ ಸಂಚಲನ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ಸಹಕರಿಸಿದರು.

ಜಗತ್ತಿನ ಶ್ರೇಷ್ಠ ಗುರು: ಬಂಗೇರ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ ಕೆ.ವಸಂತ ಬಂಗೇರ ಪರಿಸರ ದಿನದ ಅಂಗವಾಗಿ ಸಸಿ ವಿತರಿಸಿ ಮಾತನಾಡುತ್ತಾ ಯಾವುದೇ ಕಾರ್ಯಕ್ರಮದಲ್ಲಿ ಸಮಯ ಪ್ರಜ್ಞೆಯನ್ನು ಪಾಲಿಸಿ ಸಭಾ ಗೌರವ ಬೆಳೆಸಬೇಕು. ಜಗತ್ತಿನ ಶ್ರೇಷ್ಠ ಗುರು ಬ್ರಹ್ಮಶ್ರೀ ನಾರಾಯಣ ಗುರು ಸಮಾಜದ ಜೀವಂತ ಗುರುಗಳು ಹಿಂದುಳಿದ ವರ್ಗದವರನ್ನು ಸಮಾಜದಲ್ಲಿ ತಲೆ ಎತ್ತಿ ನಡೆಸಲು ಅವಕಾಶ ಮಾಡಿಕೊಟ್ಟ ಗುರುಗಳು ಯುವವಾಹಿನಿಯಂತಹ ಸಂಘಟನೆ ಮೂಲಕ ಯುವಕರು ಸಮಾಜದ ಏಳಿಗೆಗಾಗಿ ಪರಿಪೂರ್ಣ ಶಿಕ್ಷಣ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.