ನಿವೃತ ಮುಖ್ಯ ಶಿಕ್ಷಕ ಸೇಸಪ್ಪಗೌಡ ಬಾಜಿಮಾರು ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಇಲ್ಲಿಯ ಬಾಜಿಮಾರು ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ಸೇಸಪ್ಪ ಗೌಡ (85.ವ) ಬಾಜಿಮಾರು ರವರು ಜೂ.2ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಆಲಂತ್ತಾಯ, ಮುಂಡೂರು, ಕನ್ಯಾಡಿ, ಹಳೆಪೇಟೆ ಮೊದಲಾದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದರು. ಮಲೆಬೆಟ್ಟು ಶ್ರೀ ಮಹಾಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕಿರಿಯಾಡಿ ಮತ್ತು ಬದನಾಜೆ ಭಜನಾ ಮಂಡಳಿಯ ಸದಸ್ಯರಾಗಿ ಸಮಾಜಸೇವೆಗೈಯುತ್ತಾ ಇದ್ದರು. ಬದನಾಜೆ ಹಿ.ಪ್ರಾ.ಶಾಲೆಯಲ್ಲಿ ಗೌರವ ಶಿಕ್ಷಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ವಸುಮತಿ ,ಮೂರುಮಂದಿ ಪುತ್ರರಾದ ಪುರುಷೋತ್ತಮ, ಸೋಮಶೇಖರ, ಗೋಪಾಲಕೃಷ್ಣ, ಮೂರು ಮಂದಿ ಪುತ್ರಿಯರಾದ ರಾಜೇಶ್ವರಿ ಚಂದ್ರಕಾಂತ್, ಲಕ್ಷ್ಮೀ ಕರುಣಾಕರ್, ನೀಲವೇಣಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.