HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮಾಯಾ ಭಜನಾ ಮಂಡಳಿಯಿಂದ ಪುಸ್ತಕ ವಿತರಣೆ ಹಾಗೂ ಗೌರವಾರ್ಪಣೆ

ಬೆಳಾಲು: ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿ ಮಾಯಾ ಬೆಳಾಲು ಇದರ ಆಶ್ರಯದಲ್ಲಿ ಶ್ರೀ ಮಾಯಾ ಮಹದೇವ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ಜೂ.3 ರಂದು ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷ ವಸಂತ.ಬಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಮಾಯಾ ಮಹದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್. ಪದ್ಮಗೌಡ ಮಾತನಾಡಿ, ಭಜನೆಯ ಮೂಲಕ ದೇವರ ನೇರ ಸ್ಮರಣೆಯಾಗುವುದು. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಂಘಟನೆಗೂ ಪ್ರೇರಣೆಯಾಗುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಮಂಜನೊಟ್ಟು ಮಾತನಾಡುತ್ತಾ ಭಜನೆಯ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಹೆಚ್ಚು ಒತ್ತುನೀಡುವುದರಿಂದ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧ್ದಿಯಾಗುತ್ತದೆ ಎಂದರು. ಸ್ಥಳೀಯ ಮಾಯಾ ಹಿ.ಪ್ರಾ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಎ.ಗಂಗಾಧರ ಸಾಲಿಯಾನ್, ಸುದ್ದಿ ಬಿಡುಗಡೆ ಪತ್ರಿಕೆಯ ಸಹಾಯಕ ವ್ಯವಸ್ಥಾಪಕ ಪಿ.ಜಾರಪ್ಪ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಜಿರೆ ಶ್ರೀ.ಧ.ಮಂ. ನ್ಯಾಚುರೋಪತಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶೇಖರ ಗೌಡ ಕೊಲ್ಲಿಮಾರು ಸನ್ಮಾನಿತರನ್ನು ಪರಿಚಯಿಸಿ ಭಜನಾ ಮಂಡಳಿಯ ಕಾರ್ಯದರ್ಶಿ ಶಿವಕೀರ್ತಿ ವಂದಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳು, ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಭಕ್ತಾಧಿಗಳು ಉಪಸ್ಥಿತರಿದ್ದರು.

ಗೌರವಾರ್ಪಣೆ
ಇದೇ ಸಂಧರ್ಭದಲ್ಲಿ ಸ್ಥಳೀಯ  ಮಾಯಾ ಹಿ.ಪ್ರಾ.ಶಾಲೆಯಿಂದ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 3 ವಿದ್ಯಾರ್ಥಿನಿಯರಾದ ಕು| ತೃಷಾ ಪಾಲ್ದಡ್ಕ, ಕು| ಸ್ಪೂರ್ತಿ ಅಮುಂಜಿ, ಕು| ರೇಷ್ಮ ಕೆರೆಕೋಡಿ ಹಾಗೂ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಭಜನಾ ಮಂಡಳಿಯ ಕೋಶಾಧಿಕಾರಿ ಪೂರ್ಣೇಶ್ ಪುಚ್ಚೆಹಿತ್ಲು ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟು ಸುಕೇಶ್ ಎರ್ಮಳ ಇವರುಗಳನ್ನು ಭಜನಾ ಮಂಡಳಿ ವತಿಯಿಂದ ಸಮಾರಂಭದ ಅತಿಥಿಗಳು ಗೌರವಿಸಿದರು

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.