ಬೆಳಾಲು : ಬಿಲ್ಲವ ಸಂಘದ ವತಿಯಿಂದ ಗುರುಪೂಜೆ, ಪುಸ್ತಕ ವಿತರಣೆ

ಬೆಳಾಲು: ಶ್ರೀ ನಾರಾಯಣ ಗುರುಸೇವಾ ಸಮಿತಿ ಗ್ರಾಮ ಸಮಿತಿ ಬೆಳಾಲು, ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ ಬೆಳಾಲು ಮತ್ತು ಯುವವಾಹಿನಿ ಬೆಳಾಲು ಸಂಚಲನಾ ಸಮಿತಿ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಗುರುಪೂಜೆ, ಸ್ವಜಾತಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ 21ನೇ ವಾರ್ಷಿಕ ಮಹಾಸಭೆ ಜೂ.2ರಂದು ಮಾಯಾ ಕಲ್ಲಗುಡ್ಡೆ ಸಂಘದ ಜಾಗದಲ್ಲಿ ಜರುಗಿತು.
ಇದರ ಅಂಗವಾಗಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ನಾಣ್ಯಪ್ಪ ಪೂಜಾರಿ ಮುಂಡ್ರೊಟ್ಟು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ ಮಾತನಾಡಿ, ನಾರಾಯಣ ಗುರುಗಳು ಸಮಾಜದ ದೇವರು. ಇವರ ತತ್ವಆದರ್ಶದಲ್ಲಿ ಸಂಘಟನೆ ಮೂಲಕ ವಿದ್ಯೆಗೆ ಪ್ರೋತ್ಸಾಹಿಸಬೇಕು. ಕಡಿಮೆ ಸಂಖ್ಯೆಯಲ್ಲಿ ಸಮಾಜಬಾಂಧವರು ಇರುವ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ವಿದ್ಯೆಗೆ ಪ್ರೋತ್ಸಾಹಿಸುತ್ತಿರುವುದು ಸಂಘದ ಮಾದರಿಯಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಂಜಿತ್ ಹೆಚ್.ಡಿ ಮಾತನಾಡಿ ಸಮಿತಿಯು ಹಮ್ಮಿಕೊಂಡಿರುವ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು. ಸಂಘಟನೆಯಲ್ಲಿ ರಾಜಕೀಯ ಬಿಟ್ಟು ಎಲ್ಲರೂ ಸಮಾಜದ ಉದ್ಧಾರಕ್ಕೆ ದುಡಿಯಬೇಕು ಎಂದರು.
ಬೆಳಾಲು ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಸುವರ್ಣ ಕನ್ಯಾಡಿ, ಬೆಳಾಲು ಗ್ರಾ.ಪಂ ಸದಸ್ಯ ದಯಾನಂದ ಪಿ, ಗ್ರಾಮಸಮಿತಿಯ ಸ್ಥಾಪಕಾಧ್ಯಕ್ಷ ಸೇಸಪ್ಪ ಪೂಜಾರಿ ಉಪ್ಪಾರು, ಯುವವಾಹಿನಿ ಕೇಂದ್ರ ಸಮಿತಿಯ ನಾಮನಿರ್ದೇಶಿತ ಸದಸ್ಯ ಉಮಾನಾಥ ಕೋಟ್ಯಾನ್, ಸ್ಥಳದಾನಿ ಪರವಾಗಿ ಮೋಹನ ಪೂಜಾರಿ ಬರೆಮೇಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗ್ರಾ.ಮ ಸಮಿತಿಯ ಗೌರವಾಧ್ಯಕ್ಷ ರಮೇಶ ಪೂಜಾರಿ ಗುಂಡ್ಯ, ಯುವ ಬಿಲ್ಲವವೇದಿಕೆ ಅಧ್ಯಕ್ಷ ಅವಿನಾಶ್ ಎಂ, ಕಾರ್ಯದರ್ಶಿ ಪ್ರವೀಣ ಬಾಗಿದಡಿ, ಬಿಲ್ಲವ ಮಹಿಳಾ ವೇದಿಕೆಯ ಕಾರ್ಯದರ್ಶಿ ವಿಜಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಂಜನೊಟ್ಟು ದಿ| ಕರಿಯ ಪೂಜಾರಿ ಸ್ಮರಣಾರ್ಥ ನಾರಾಯಣ ಸುವರ್ಣರು ನೀಡಿರುವ ವಿದ್ಯಾನಿಧಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗೆ ಮತ್ತು ಗ್ರಾಮಸಮಿತಿ ವ್ಯಾಪ್ತಿಯ ೫ ರಿಂದ ೧೦ನೇತರಗತಿ ವರಗಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬರೆಯುವ ಪುಸ್ತಕ ವಿತರಿಸಲಾಯಿತು.
ರಘುನಾಥ ಶಾಂತಿಯವರ ನೇತೃತ್ವದಲ್ಲಿ ಗುರುಪೂಜೆ ಶ್ರೀಸತ್ಯನಾರಾಯಣ ಪೂಜೆ ನೆರವೇರಿತು.
ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ಅಧಿಕಾರಿ ನಾರಾಯಣ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸ್ಥಾಪಕ ಕಾರ್ಯದರ್ಶಿ ತಾಲೂಕು ಸಂಘದ ನಿರ್ದೇಶಕ ಜಾರಪ್ಪ ಪೂಜಾರಿ ನಿರೂಪಿಸಿ, ತಾಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಉಪ್ಪಾರು ವಂದಿಸಿದರು.
ಗ್ರಾಮ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.