ಬೆಳಾಲಿನಲ್ಲಿ ಶ್ರೀ ವಿಘ್ನೇಶ್ವರ ಸ್ಟುಡಿಯೋ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಇಲ್ಲಿಯ ಪಿ.ಎಚ್. ಕಾಂಪ್ಲೆಕ್ಸ್‌ನಲ್ಲಿ ಶ್ರೀ ವಿಘ್ನೇಶ್ವರ ಡಿಜಿಟಲ್ ಸ್ಟುಡಿಯೋ, ವೀಡಿಯೋ ಹಾಗೂ ಜೆರಾಕ್ಸ್ ಸೆಂಟರ್  ಇತ್ತೀಚೆಗೆ ಶುಭಾರಂಭಗೊಂಡಿತು.
ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಯೋಗೀಶ್ ಗೌಡ, ಬೆಳಾಲು ಪ್ರಾ.ಕೃ.ಪ. ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣಗೌಡ ಎಳ್ಳುಗದ್ದೆ, ಪಿ.ಎಚ್. ಕಾಂಪ್ಲೆಕ್ಸ್‌ನ ಮಾಲಕ ದಿನೇಶ್ ಗೌಡ, ನೋಟರಿ ವಕೀಲ ಶ್ರೀನಿವಾಸ ಗೌಡ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಯಂತ ಗೌಡ ಓಣ್ಯಾಲು, ಭವಾನಿ ಮಾರ್ಪಾಲು, ಸೇವಾಪ್ರತಿನಿಧಿ ಕು| ಆಶಾ, ಶಿಲ್ಪಿ ಶಶಿಧರ ಆಚಾರ್ಯ, ಶೇಖರ ಗೌಡ ಕೊಲ್ಲಿಮಾರು ಇನ್ನಿತರ ಗಣ್ಯರು ಊರವರು ಹಾಜರಿದ್ದು ಶುಭಕೋರಿದರು.
ಮಾಲಕರ ತಂದೆ ಸಂಜೀವ ಗೌಡ ಕನಿಕ್ಕಿಲ, ಸಹೋದರರು, ಕುಟುಂಬಸ್ಥರು, ಮಾಲಕ ಗಣೇಶ್ ಕನಿಕ್ಕಿಲ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.