ಮಡಂತ್ಯಾರು: ಸ್ಫೂರ್ತಿ ಸ್ವಸಹಾಯ ಸಂಘ ಉದ್ಘಾಟನೆ

ಮಡಂತ್ಯಾರು: ಇಲ್ಲಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ ಪಾರೆಂಕಿ ಕಾರ್ಯಕ್ಷೇತ್ರದಲ್ಲಿ ಸ್ಫೂರ್ತಿ ಸ್ವಸಹಾಯ ಸಂಘವನ್ನು ಮಡಂತ್ಯಾರು ಮಹಿಳಾ ಮಂಡಲ ಶಿಶು ವಿಹಾರದಲ್ಲಿ ಉದ್ಘಾಟಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿಯವರು ದೀಪ ಪ್ರಜ್ವಲಿಸಿ, ದಾಖಲಾತಿ ಹಸ್ತಾಂತರ ಮಾಡುವ ಮೂಲಕ ನೂತನ ಸ್ವಸಹಾಯ ಸಂಘಕ್ಕೆ ಚಾಲನೆ ನೀಡಿದರು. ವಲಯ ಮೇಲ್ವಿಚಾರಕ ಸಚಿನ್ ಸಂಘದ ನಿರ್ವಹಣೆಯ ಬಗ್ಗೆ ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ಶೋಭಾಶ್ರೀ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.