ಕುಕ್ಕೇಡಿ ಶಾಲಾ ಪ್ರಾರಂಭೋತ್ಸವ

ಕುಕ್ಕೇಡಿ: ಸ.ಹಿ.ಪ್ರಾಥಮಿಕ ಶಾಲೆ ಕುಕ್ಕೇಡಿ ಇಲ್ಲಿ 2019-20ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್‍ಯಕ್ರಮವು ಜರಗಿತು. ಹೊಸದಾಗಿ ಶಾಲೆಗೆ ದಾಖಲಾತಿ ಹೊಂದಿದ ವಿದ್ಯಾರ್ಥಿಗಳನ್ನು ಹೂ ನೀಡಿ ಸ್ವಾಗತಿಸಲಾಯಿತು. 1ನೇ ತರಗತಿಗೆ ದಾಖಲಾತಿ ಹೊಂದಿದ ವಿದ್ಯಾರ್ಥಿಗಳು ದೀಪ ಬೆಳಗಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ ಪೇರ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡುಗೈದಾನಿ ವೆಂಕಪ್ಪ ಪೂಜಾರಿ ಕಾಜಲ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶೋಭ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಮೂಲ್ಯ ಬರ್ನತ್ಯಾರು ಉಪಸ್ಥಿತರಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೀಡಿದ ಉಚಿತ ಪಠ್ಯ ಪುಸ್ತಕವನ್ನು ಹಾಗೂ ಊರದಾನಿಗಳಾದ ಸ್ವರ್ಣಲತಾ ವಸಂತ ಹೆಗ್ಡೆ ಬಸವನಗುಡಿ ಮಡಂತ್ಯಾರು ಹಾಗೂ ವೆಂಕಪ್ಪ ಪೂಜಾರಿ ಕಾಜಲ ಇವರು ನೀಡಿದ ನೋಟು ಪುಸ್ತಕ ಹಾಗೂ ಲೇಖನಿ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಉದ್ಯಮಿ ದಿನೇಶ್ ಬಾಳಿಗ ಪುಂಜಾಲಕಟ್ಟೆ ಮತ್ತು ಶಾಲಾ ಸಹಶಿಕ್ಷಕಿ ಗೀತಾ.ಕೆ ವಿದ್ಯಾರ್ಥಿಗಳಸಿಹಿ ತಿಂಡಿಯನ್ನು ಸಿಹಿತಿಂಡಿ ವಿತರಿಸಿದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಾಲಾ ವಿದ್ಯಾರ್ಥಿಗಳ ಹೆತ್ತವರು, ಪೋಷಕರು ಹಾಗೂ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಭಾಸ್ಕರ ಸ್ವಾಗತಿಸಿ ,ಪ್ರಾಸ್ತಾವಿಸಿದರು. ಶಾಲಾ ಶಿಕ್ಷಕ ಸತೀಶ್ ಕಾರ್ಯಕ್ರಮ ನಿರೂಪಿಸಿ, ಗೌರವಶಿಕ್ಷಕಿ ಶಶಿಕಲಾ.ಪಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.