ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಗರ್ಭನ್ಯಾಸ, ಷಢಾಧಾರ ಕಾರ್ಯಕ್ರಮ

ನೆರಿಯ: ಇಲ್ಲಿಯ ಶ್ರೀ ಕ್ಷೇತ್ರ ಕಾಟಾಜೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವಿಯ ನೂತನ ದೇವಾಲಯ ನಿರ್ಮಾಣದ ಪ್ರಯುಕ್ತ ಗರ್ಭನ್ಯಾಸ ಮತ್ತು ಷಢಾಧಾರ ಕಾರ್ಯಕ್ರಮವು ಮೇ.30ರಿಂದ 31 ವರೆಗೆ ಜರುಗಿತು.
ಮೇ.30 ರಂದು ಸಂಜೆ ವಾಸ್ತುಬಲಿ, ಗರ್ಭನ್ಯಾಸ, ಇಷ್ಟಾಂಗನ್ಯಾಸ ಪ್ರತಿಷ್ಠೆ ನಡೆದು, ಮೇ.31 ರಂದು ಬೆಳಿಗ್ಗೆ ಗಣಹೋಮ, ಷಢಾಧಾರ, ಮಹಾಪೂಜೆ ನಡೆದು ಪ್ರಸಾದ ವಿತರಣೆ ಜರುಗಿತು.

ದೇವಸ್ಥಾನದಲ್ಲಿ ಗಣಪತಿ ದೇವರ ಗುಡಿ, ಹೊರಗಡೆ ಗುಳಿಗ ಭೈರವ ದೈವಗಳ ಗುಡಿಗಳು, ಸುತ್ತುಪೌಳಿ ಹಾಗೂ ದೇವಾಲಯವು ಸಂಪೂರ್ಣ ಶಿಲಾಮಯವಾಗಲಿದೆ. 2020ನೇ ವರ್ಷದಲ್ಲಿ ಪ್ರತಿಷ್ಠಾಬ್ರಹ್ಮಕಲಶ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಕೃಷ್ಣಕುಮಾರ್ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಜಯದೇವ್ ತಿಳಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ  ಆಡಳಿತ ಸಮಿತಿ ಅಧ್ಯಕ್ಷರು, ಸರ್ವಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಊರ ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೃತಾರ್ಥರಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.