ಕಾಲುಜಾರಿ ನದಿಗೆ ಬಿದ್ದು ವ್ಯಕ್ತಿ ಸಾವು

ಧರ್ಮಣ  ಗೌಡ

ನಿಡ್ಲೆ: ಇಲ್ಲಿಯ ಕುದ್ರಾಯನದಿಗೆ ಸ್ನಾನಕ್ಕೆಂದು ತೆರಳಿದ ವ್ಯಕ್ತಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಇಂದು (ಮೇ.31) ವರದಿಯಾಗಿದೆ.

ಪುದುವೆಟ್ಟು ಗ್ರಾಮದ ಮೇಲಿನಡ್ಕ ನಿವಾಸಿ ಧರ್ಮಣ  ಗೌಡ ಕಾಲುಜಾರಿ ಬಿದ್ದು ಮೃತಪಟ್ಟ್ಟ ದುರ್ದೈವಿ. ಇವರು ಮೇ.30 ರಂದು ಮದ್ಯಾಹ್ನ ಮನೆಯಿಂದ ಕುದ್ರಾಯಕ್ಕೆ ಬಂದವರು ಸ್ನಾನಕ್ಕೆಂದು ಕುದ್ರಾಯ ನದಿ ಕಡೆ ತೆರಳಿದ್ದು, ಅನಂತರ ನಾಪತ್ತೆಯಾಗಿದ್ದರು. ವಿಚಾರ ತಿಳಿದು ಸ್ಥಳೀಯರು ಹಾಗೂ ಮನೆಯವರು ಸೇರಿ ಹುಟುಕಾಟ ನಡೆಸಿದ್ದು, ಕುದ್ರಾಯ ನದಿ ದಂಡೆಯಲ್ಲಿ ಇವರ ಬಟ್ಟೆ ಹಾಗೂ ಚಪ್ಪಲಿ ಸಿಕ್ಕಿತ್ತು. ಶೋಧ ಕಾರ್ಯ ನಡೆಸಿ ಇಂದು ಬೆಳಿಗ್ಗೆ ಧರ್ಮಣ  ಗೌಡ ರವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.