HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಗ್ರಾ.ಪಂ 3 ಕ್ಷೇತ್ರಗಳ ಉಪಚುನಾವಣೆ:ಎರಡು ಕಾಂಗ್ರೆಸ್, ಓರ್ವ ಬಿಜೆಪಿ ಅಭ್ಯರ್ಥಿಗೆ ಜಯ

ಬೆಳ್ತಂಗಡಿ : ಉಜಿರೆ ಹಾಗೂ ಕೊಯ್ಯೂರು ಗ್ರಾಮ ಪಂಚಾಯತದ 3 ಸದಸ್ಯ ಸ್ಥಾನಗಳಿಗೆ ಮೇ.29 ರಂದು ನಡೆದ ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಸಾಧಿಸಿದೆ.

ಉಜಿರೆ ಗ್ರಾ.ಪಂನ ಕ್ಷೇತ್ರ 4ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸುಮಂಗಳ ಜಿನ್ನಪ್ಪ ನಾಯ್ಕರವರು 296 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ವೇದಾವತಿ ನಾರಾಯಣ ನಾಯ್ಕ 236 ಮತಗಳನ್ನು ಪಡೆದು ಪರಾಜಯಗೊಂಡಿದ್ದಾರೆ.

ಉಜಿರೆ ಕ್ಷೇತ್ರ 11 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಿನ್ನಪ್ಪ ನಾಯ್ಕ ರವರು 283 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಸತೀಶ್ ನಾಯ್ಕ ರವರು 195 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಕೊಯ್ಯೂರು ಗ್ರಾ.ಪಂನ ಕ್ಷೇತ್ರ-2ರಲ್ಲಿ ಬಿಜೆಪಿ ಬೆಂಬಲಿತ ಕೊರಗಪ್ಪ ಪಿಜಕ್ಕಳ ರವರು 303 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಕಾಂಗ್ರೆಸ್, ಸಿಪಿಐಎಂ ಬೆಂಬಲಿತ ಬಾಬು ಹೇಮಲ್ಕೆ 256 ಮತಗಳನ್ನು ಪಡೆದು ಪರಾಜಯಗೊಂಡಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.