ವೇಣೂರು ಐಸಿವೈಎಂನಿಂದ ಅಜಿಲಕೆರೆಯ ಅಭಿವೃದ್ಧಿಗೆ ಚಾಲನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಾಯಕ ನನ್ನ ಉತ್ತಮ ಗೆಳೆಯ: ತಹಶೀಲ್ದಾರ್ ಗಣಪತಿ ಶಾಸ್ತ್ರಿ

ವೇಣೂರು: ಐತಿಹಾಸಿಕ ಹಿನ್ನೆಲೆಯಿರುವ ವೇಣೂರು ಅಜಿಲಕೆರೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಭಾರತೀಯ ಕಥೋಲಿಕ್ ಯುವ ಸಂಚಲನ (ಐಸಿವೈಎಂ) ಆಶ್ರಯದಲ್ಲಿ ವೇಣೂರು ಗ್ರಾ.ಪಂ. ಸಹಕಾರದೊಂದಿಗೆ ಯುವಜನರ ವರುರ್ಷದ ಪ್ರಯುಕ್ತ ವೇಣೂರು ಕ್ರಿಸ್ತರಾಜ ದೇವಾಲಯದ ಐಸಿವೈಎಂ ಘಟಕದ ಸಹಭಾಗಿತ್ವದಲ್ಲಿ ಶ್ರಮದಾನದ ಮೂಲಕ ಮೇ.29 ರಂದು ಅಭಿವೃದ್ಧಿ ಕಾರ್ಯ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು, ಪುರಾತನ ಕೆರೆ, ಬಾವಿಗಳ ಅಭಿವೃದ್ಧಿಗೆ ಪ್ರತಿಬಂಧಿಸುವುದು ಸರಿಯಲ್ಲ. ಜಾಗದ ಮೋಹದಿಂದ ಇಂತಹ ಕೆರೆ, ಬಾವಿಗಳು ಪಾಲು ಬೀಳಲು ಕಾರಣವಾಗುತ್ತಿವೆ. ಕೆರೆಗಳ ಹೂಳೆತ್ತಿ ಅಭಿವೃದ್ಧಿ ಪಡಿಸುವುದರಿಂದ ಅಂತರ್ಜಲ ಹೆಚ್ಚಳವಾಗುತ್ತದೆ. ಇದೊಂದು
ಪುಣ್ಯದ ಕಾರ್ಯ. ಜಲಸಂರಕ್ಷಣೆಗೆ ಸಹಕಾರ ನಿರಂತರ ನೀಡುತ್ತೇನೆ ಎಂದ ಅವರು, ಕಾಯಕ ನನ್ನ ಉತ್ತಮ ಗೆಳೆಯ ಎಂದರು. ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂ ಯುವ ನಿರ್ದೇಶಕ ವಂ| ರೊನಾಲ್ಡ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.

ಬೆಳ್ತಂಗಡಿ ವಲಯದ ಐಸಿವೈಎಂ ಯುವ ನಿರ್ದೇಶಕರಾದ ವಂ| ಬೇಸಿಲ್ ವಾಸ್ ಅವರು ಸಂದೇಶ ನೀಡಿ, ಜನತೆಗೆ ಒಳ್ಳೆಯದನ್ನು ಬಯಸುವುದನ್ನು ದೇವರು ಮೆಚ್ಚುತ್ತಾನೆ. ನೂರಾರು ಜನತೆಗೆ ಉಪಯೋಗವಾಗುವ ಇಂತಹ ಕಾರ್ಯಗಳು ಯುವಶಕ್ತಿಯಿಂದ ನಿರಂತರವಾಗಿ ನಡೆಯಲಿ ಎಂದರು. ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಪೀಟರ್ ಅರನ್ಹಾ, ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂ ಸಹಾಯಕ ನಿರ್ದೇಶಕ ವಂ| ಅಶ್ವಿನ್ ಕರ್ಡೊಜಾ, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ತಾ.ಪಂ. ಸದಸ್ಯ ಕೆ. ವಿಜಯ ಗೌಡ, ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಸಾದ್ ಅಜಿಲ, ವೇಣೂರಿನ ಖ್ಯಾತ ವೈದ್ಯ ಡಾ| ಶಾಂತಿಪ್ರಸಾದ್, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ವೇಣೂರು ಚರ್ಚ್‌ನ ಪಾಲನ ಪರಿಷತ್ ಉಪಾಧ್ಯಕ್ಷ ರೊನಾಲ್ಡ್ ಡಿಸೋಜ, ಕಾರ್ಯದರ್ಶಿ ಸ್ಟೀವನ್ ಡಿಕುನ್ಹಾ, ವೇಣೂರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣರಾಜ, ಮೂಡಬಿದಿರೆ ಆಳ್ವಾಸ್ ಕಾಲೇಜಿನ ದಾಖಲಾತಿ ಅಧಿಕಾರಿ ಎಲ್.ಜೆ. ಫೆರ್ನಾಂಡಿಸ್, ಉದ್ಯಮಿ ಜೇಮ್ಸ್ ಮೆಂಡೊನ್ಸಾ, ವೇಣೂರು ನವಚೇತನ ಶಾಲೆಯ ಮುಖ್ಯ ಶಿಕ್ಷಕಿ ಭ| ಶಾಲಿನಿ ಡಿಸೋಜ, ಮೂಡುಕೋಡಿ ಹಾಲು ಉ.ಸ.ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ವೇಣೂರು ಐಸಿವೈಎಂ ಅಧ್ಯಕ್ಷ ಡೆಲ್ಸನ್ ಡಿಸೋಜ, ಸಚೇತಕಿ ಭ| ವಿಲ್ಮಾ ಡೇಸಾ, ಸಚೇತಕ ಅರುಣ್ ಡಿಸೋಜ, ಕಾರ್ಯದರ್ಶಿ ಕು| ರೇಶ್ಮಾ ಫೆರ್ನಾಂಡಿಸ್, ಡೆನ್ನಿಸ್ ಸಿಕ್ವೇರಾ, ಆಲ್ಬರ್ಟ್ ಫೆರ್ನಾಂಡಿಸ್, ವಿಲ್ಸಾ ಮೊಂತೇರೋ, ವೇಣೂರು ಗ್ರಾ.ಪಂ. ಸದಸ್ಯರು, ಐಸಿವೈಎಂ ನಿರ್ದೇಶಕರುಗಳು ಹಾಗೂ ಸದಸ್ಯರು, ವೇಣೂರು ಹೋಬಳಿಯ ಗ್ರಾಮ ಲೆಕ್ಕಿಗರು ಹಾಗೂ ಸಹಾಯಕರು ಶ್ರಮದಾನದಲ್ಲಿ ಕೈಜೋಡಿಸಿದರು.

ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ ಪ್ರಾಸ್ತಾವಿಸಿ, ಅನೂಪ್ ಜೆ. ಪಾಯಸ್ ಸ್ವಾಗತಿಸಿದರು. ಸ್ಟ್ಯಾನಿ ಡಿಸೋಜ ಕಾರ್ಯಕ್ರಮ ನಿರ್ವಹಿಸಿ, ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂ ಕಾರ್ಯದರ್ಶಿ ಕು| ಪೆವಿಶಾ ಮೊಂತೇರೋ ವಂದಿಸಿದರು. ಸುಮಾರು 60 ಮಂದಿ ಐಸಿವೈಎಂ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.

ಸಾಥ್ ನೀಡಿದ ತಹಶೀಲ್ದಾರ್!
ಐಸಿವೈಎಂ ಕೈಗೊಂಡ ವೇಣೂರು ಅಜಿಲ ಕೆರೆಯ ಅಭಿವೃದ್ಧಿಗೆ ಚಾಲನೆ ನೀಡಿದ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ಬಳಿಕ ಶ್ರಮದಾನದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಾಥ್ ನೀಡಿದರು. ಸ್ವತಹ ತಾವೇ ಕೆರೆ ಬದಿಯ ಪೊದೆ, ಮರದ ಗೆಲ್ಲುಗಳನ್ನು ತೆಗೆದು ಯುವ ಕಾರ್ಯಕರ್ತರಿಗೆ ಸ್ಪೂರ್ತಿ ನೀಡಿದರು. ಜತೆಗಿದ್ದ ವೇಣೂರು ಹೋಬಳಿಯ ಗ್ರಾಮಲೆಕ್ಕಿಗರಾದ ಉಮೇಶ್, ನಾರಾಯಣ ಕುಲಾಲ್, ಸುಜಿತ್, ಅಕ್ಷತ್, ಪ್ರದೀಪ್, ಹರ್ಷ, ಶಿವರಾಜ್ ಬಾದರ್ಲಿ, ಲಿಂಗರಾಜ್, ಸಿದ್ದೇಶ್, ಅಂಕಿತ್, ಪ್ರದೀಪ್ ಹಾಗೂ ಪೃಥ್ವಿರಾಜ್ ಅವರು ಶ್ರಮದಾನದಲ್ಲಿ ಕೈಜೋಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.