ಬೆಳ್ತಂಗಡಿ: ಗ್ರಾಮೀಣ ಪ್ರದೇಶದಲ್ಲಿ ಓದಿ ಉದ್ಯೋಗ ಅನ್ವೇಷಣೆಯಲ್ಲಿ ಇರುವ ಯುವ ಸಮುದಾಯಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಹಲವಾರು ಉದ್ಯೋಗ ಮೇಳಗಳು, ನೇರ ಸಂದರ್ಶನಗಳನ್ನು ಆಯೋಜಿಸುತ್ತಿರುವ ವಿದ್ಯಾಮಾತ ಫೌಂಡೇಶನ್ ವತಿಯಿಂದ ಜಯಕರ್ನಾಟಕ ಸಂಘಟನೆಯ ಸಹಕಾರದೊಂದಿಗೆ ಜೂ. 9ರಂದು ಇಲ್ಲಿಇನ ಬೆಳ್ತಂಗಡಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಗ್ರಾಮೀಣ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಭಾಗ್ಯೇಶ್ ರೈ ಹೇಳಿದ್ದಾರೆ.
7 ನೇ ತರಗತಿ, ಎಸ್.ಎಸ್.ಎಲ್.ಸಿ/ಪಿಯುಸಿ/ಐಟಿಐ/ಡಿಪ್ಲೊಮಾ/ಯಾವುದೇ ಪದವಿ/ಸ್ನಾತಕೋತ್ತರ ಪದವಿ ಓದಿರುವ ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗಿಯಾಗಿ ಅವಕಾಶ ಪಡೆದುಕೊಳ್ಳಬಹುದು.
ಐಟಿ, ನಾನ್ ಐಟಿ, ಸಿವಿಲ್, ಬ್ಯಾಂಕಿಂಗ್, ಫೈನಾನ್ಸ್, ಮೆನಿಫ್ಯಾಕ್ಚರಿಂಗ್, ಮೆಕ್ಯಾನಿಕಲ್, ಅಟೋಮೊಬೈಲ್, ಹೊಟೇಲ್ ಮೆನೇಜ್ಮೆಂಟ್, ನರ್ಸಿಂಗ್, ಮೆಡಿಕಲ್, ಹೆಲ್ತ್ಕೇರ್, ಎಜ್ಯುಕೇಶನ್, ಮಾರ್ಕೆಟಿಂಗ್ ಸಂದರ್ಶನದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸಂದರ್ಶನ ಎದುರಿಸುವ ಮಾಹಿತಿ ಕಾರ್ಯಾಗಾರವನ್ನೂ ಸ್ಥಳದಲ್ಲಿ ನಡೆಸಲಾಗುವುದು. ಸದ್ಯ ವಿದ್ಯಾಭ್ಯಾಸದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು.
ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವವರು ಬೆಳ್ತಂಗಡಿ ಶಾಖಾ ಕಚೇರಿಯನ್ನು ಸಂಪರ್ಕಿಸಬಹುದು:
ವಿದ್ಯಾಮಾತ, ಪಿಂಟೋ ಕಾಂಪ್ಲೆಕ್ಸ್, 2ನೆ ಮಹಡಿ, ಮುಖ್ಯರಸ್ತೆ, ಬೆಳ್ತಂಗಡಿ. ಮಾಹಿತಿಗಾಗಿ- 8884555792 / 7619264398/ 9148935808