ರಸ್ತೆ ಸುರಕ್ಷತೆ ಬಗ್ಗೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಜಾಗೃತಿ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪುಂಜಾಲಕಟ್ಟೆ: ಇಲ್ಲಿನ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಂಗವಾಗಿ ಸರಕಾರಿ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಂಚಾರ ನಿಯಯಮಗಳು ಮತ್ತು ರಸ್ತೆ ಸುರಕ್ಷತೆ ಬಗ್ಗೆ ಪ್ರಬಂಧ ಮತ್ತು ಚರ್ಚಾ ಕೂಟ ಆಯೋಜಿಸಲಾಗಿತ್ತು. ಬಳಿಕ ಜಾಗೃತಿ ಜಾಥಾವನ್ನೂ ನಡೆಸಲಾಯಿತು.


ಅತೀ ಹೆಚ್ಚು ಜನ ಸೇರುವ ಪ್ರದೇಶದಲ್ಲಿ, ಕಟ್ಟಡ ಕಾರ್ಮಿಕರು ಹಾಗೂ ಮಾಲಿಕರಿಗೆ ಮಾಹಿತಿ, ಕಾರ್ಖಾನೆಯ ಮಾಲಿಕರು ಹಾಗು ಕಾರ್ಮಿಕರಿಗೆ ಮಾಹಿತಿ, ಠಾಣಾವ್ಯಾಪ್ತಿಯ ಆಟೊ, ಜೀಪು ಹಾಗೂ ಸರಕುಗಳನ್ನು ಮತ್ತು ಜನರನ್ನು ಸಾಗಿಸುವ ಇತರೆ ವಾಹನಗಳ ಚಾಲಕ ಮಾಲಕರಿಗೆ ರಸ್ತೆ ಸುರಕ್ಷತೆ, ರಸ್ತೆ ನಿಯಮಗಳು, ದಂಡ ವಸೂಲಾತಿ, ಚಾಲನೆಯಲ್ಲಿ ಮೊಬೈಲ್ ಬಳಕೆಯ ದುಷ್ಪರಿಣಾಮಗಳು, ಹಾಗು ಕಾನೂನು ಅರಿವಿನ ಬಗ್ಗೆ ಠಾಣಾಧಿಕಾರಿ ಸುನೀತಾ ಸಮಗ್ರವಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಠಾಣಾ ಸಿಬ್ಬಂದಿಗಳು ಸಹಕಾರ ನೀಡಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.