ವೇಣೂರು: ಕಲಾಕಾರ್ ಕಲೋತ್ಸವ-2019 ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಲಾಕ್ಷೇತ್ರದ ಹಿನ್ನೆಲೆಯೇ ವಿಶಿಷ್ಟ್ರ್ಯ: ಹರೀಶ್ ಕುಮಾರ್

ವೇಣೂರು: ಎಲ್ಲಾ ಕ್ಷೇತ್ರಕ್ಕಿಂತ ಕಲಾಕ್ಷೇತ್ರದ ಹಿನ್ನಲೆಯೇ ವಿಶಿಷ್ಟ್ರ್ಯ. ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳನ್ನು ಬೆಳೆಸಿ, ಪ್ರೋತ್ಸಾಯಿಸಿ ಅವಕಾಶ ಕಲ್ಪಿಸುವ ಶ್ರೇಷ್ಠ ಕಾರ್ಯವನ್ನು ಕಲಾಕಾರ್ ಮಾಡುತ್ತಿದೆ. ಇವರ ಸೇವೆ ಸಮಾಜಕ್ಕೆ ನಿರಂತರ ಸಿಗಲಿ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.
ವೇಣೂರು ಶ್ರೀ ಭರತೇಶ ಸಮುದಾಯ ಭವನದಲ್ಲಿ ಮೇ 26ರಂದು ಜರಗಿದ ಕಲಾಕಾರ್ ವೇಣೂರು ಇದರ ಕಲೋತ್ಸವ-2019 ಸಮಾರಂಭದ ರಾಜ್ಯಮಟ್ಟದ ಕಿರುಚಿತ್ರಗಳ ಪ್ರದರ್ಶನ, ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ, ಚಿತ್ರ ಕಲಾವಿದರ ಸುಂದರ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಅವರು ಮಾತನಾಡಿ, ಶ್ರೇಷ್ಠ ಸಂಪ್ರದಾಯ ಮತ್ತು ಪರಂಪರೆ ಹೊಂದಿರುವ ದೇಶ ನಮ್ಮದು. ಇಲ್ಲಿರುವ ಕಲಾಪ್ರಕಾರಗಳು ಬೇರೆ ದೇಶದಲ್ಲಿ ಸಿಗಲು ಸಾಧ್ಯವಿಲ್ಲ. ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನಂತೆ ಇತರರು ಬೆಳೆಯಬೇಕೆಂಬ ಉದ್ದೇಶದಿಂದ ಅನೀಷ್ ಅಮೀನ್ ಅವರು ಕಲಾಕಾರ್ ಸಂಸ್ಥೆ ಕಟ್ಟಿರುವುದು ಶ್ಲಾಘನೀಯ. ಸಾಂಸ್ಕೃತಿಕ ಲೋಕದಲ್ಲಿ ಭವಿಷ್ಯದ ಬಾಗಿಲು ತೆರೆಯುವ ಕಾರ್ಯವನ್ನು ಕಲಾಕಾರ್ ನಿರಂತರ ಮಾಡಲಿ ಎಂದರು.
ವೇಣೂರು ವಿವೇಕಾನಂದ ಸೇವಾಟ್ರಸ್ಟ್‌ನ ಅಧ್ಯಕ್ಷ ಯಂ. ವಿಜಯರಾಜ ಅಧಿಕಾರಿ, ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ, ಝೀ ಕನ್ನಡ ಕಾಮಿಡಿ ಕಿಲಾಡಿ ಹಿತೇಶ್ ಕಾಪಿನಡ್ಕ, ಕಲಾಕಾರ್ ಇದರ ಅಧ್ಯಕ್ಷ ರುತೇಶ್ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಲಾಕಾರ್ ಇದರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಲಾಕಾರ್ ಲೋಗೊವನ್ನು ಹರೀಶ್ ಕುಮಾರ್ ಅವರು ಅನಾವರಣಗೊಳಿಸಿದರು.
ಸಂಚಾಲಕ ಝೀ ಕನ್ನಡ ಕಾಮಿಡಿ ಕಿಲಾಡಿ, ಕಲಾಕಾರ್ ಸಂಚಾಲಕ ಅನೀಷ್ ಅಮೀನ್ ವೇಣೂರು ಪ್ರಾಸ್ತಾವಿಸಿ ಸ್ವಾಗತಿಸಿದರು. ಕು| ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರ್ವಹಿಸಿ, ಕಲಾಕಾರ್ ಸದಸ್ಯೆ ಕು| ದಿವ್ಯಾ ವಂದಿಸಿದರು. ಕಲಾಕಾರ್ ಸದಸ್ಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.