ಬೆಳ್ತಂಗಡಿ ನ್ಯಾಯಾಲಯದ ಸಿಬ್ಬಂದಿ ಸತೀಶ್‌ಗೆ ಪಿಹೆಚ್‌ಡಿ ಪದವಿ

ಬೆಳ್ತಂಗಡಿ: ಇಲ್ಲಿನ ಪ್ರಧಾನ ಸಿವಿಲ್ ಮತ್ತು ಜೆಮ್‌ಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾಲಯದ ಆದೇಶಿಕ ಜಾರಿಕಾರ ಹುದ್ದೆಯಲ್ಲಿರುವ ಸಿಬ್ಬಂದಿ ಸತೀಶ್ ಕೆ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳೂರು ವಿವಿ ಯಿಂದ ಪಿಹೆಚ್‌ಡಿ ಪದವಿ ಲಭಿಸಿದೆ.
ಸತೀಶ್ ಕೆ ಅವರು ಅರ್ಥಶಾಸ್ತ್ರ ವಿಷಯದ ಅಧ್ಯಯನಕಾರರಾಗಿದ್ದು ಅವರು ವಿವಿ ಯ ಪ್ರಾಧ್ಯಾಪಕರುಗಳಾದ ಪ್ರೊಫೆಸರ್ ।ಪಿ. ಎ ರೇಗೋ, ಪ್ರೋಫೆಸರ್ ಅರಬಿ ಯು ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಇಂಪೇಕ್ಟ್ ಆಫ್ ಅರ್ಬನೈಸೇಶನ್ ಆನ್ ಎಗ್ರಿಕಲ್ಚರ್ ವಿದ್ ಸ್ಪೆಷಲ್ ರೆಫ್ರೆನ್ಸ್ ಟು ಪುಡ್ ಕ್ರಾಪ್ ಎ ಕೇಸ್ ಸ್ಟಡಿ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್” ಎಂಬ ಮಹಾಪ್ರಬಂಧಕ್ಕೆ ಈ ಪಿಹೆಚ್‌ಡಿ ಪದವಿ ದೊರೆತಿದೆ.
ಸತೀಶ್ ಅವರು ಮೂಲತಃ ಮಂಗಳೂರು ತಾಲೂಕು ಪಕ್ಷಿಕೆರೆ ಕ್ಯೂಕುಡೆ ಯವರಾಗಿದ್ದು, ಉಜಿರೆ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.