HomePage_Banner_
HomePage_Banner_
HomePage_Banner_

ಉರುವಾಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ವಾರ್ಷಿಕ ಮಹಾಸಭೆ ಮತ್ತು ಪುಸ್ತಕ ವಿತರಣೆ

Advt_NewsUnder_1

ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಾಗ ಯಶಸ್ವಿ ಬೆಳವಣಿಗೆ ಸಾಧ್ಯ: ಸುಬ್ರಹ್ಮಣ್ಯ ಗೌಡ ಕೈಕುರೆ

ಉರುವಾಲು: ಮನುಷ್ಯ ತಾನು ಆತ್ಮಸಾಕ್ಷಿಯಾಗಿ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಮಕ್ಕಳ ಭವಿಷ್ಯದ ಮೇಲೆ ಯಾವುದೇ ರೀತಿಯ ಒತ್ತಡ ಹೇರುವುದು, ಹೋಲಿಕೆ ಮಾಡಿ ಮುಗ್ದ ಮಕ್ಕಳ ಮನಸ್ಸನ್ನು ನೋಯಿಸದೆ, ಉತ್ತಮ ಗುಣಮಟ್ಟದ ಶಿಕ್ಷಣ, ಸಂಸ್ಕೃತಿ ನೀಡಿ ಪ್ರೋತ್ಸಾಹಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ ಕೈಕುರೆ ಹೇಳಿದರು.
ಅವರು ಕೊರಿಂಜ ಪಂಚಲಿಂಗೇಶ್ವರ ಸಮುದಾಯ ಭವನದಲ್ಲಿ ಮೇ.26 ರಂದು ನಡೆದ ಉರುವಾಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಇದರ 17 ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಉರುವಾಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಗೌರವಾಧ್ಯಕ್ಷ ರಾಮಣ್ಣ ಗೌಡ ಕುಕ್ಕಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯ ಟಿ ಜಯಾನಂದ ಗೌಡ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
2018-19ನೇ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸ್ವಜಾತಿ ವಿದ್ಯಾರ್ಥಿಗಳಾದ ಸ್ವಾತಿ ಮಾಲ್ದಡ್ಕ, ರಕ್ಷಿತಾ ಪಿಲಿಕುಡೇಲು ಇವರನ್ನು ನೋಟರಿ ನ್ಯಾಯವಾದಿ ಕೆ.ರಾಮಚಂದ್ರ ಗೌಡ ಬಿರ್ಮುಕೋಡಿ ಇವರು ವೈಯುಕ್ತವಾಗಿ ನಗದು ನೀಡಿ ವೇದಿಕೆಯಲ್ಲಿ ಗೌರವಿಸಿದರು ಹಾಗೂ ಈ ಸಂದರ್ಭದಲ್ಲಿ ಸ್ವಜಾತಿ ಬಾಂಧವ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಿಸಲಾಯಿತು.
ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಗೌಡ ನೀನಿ, ಯಮುನ ದಾಸಪ್ಪ ಗೌಡ ಕೋಡಿಯಡ್ಕ, ಸಮಿತಿ ಅಧ್ಯಕ್ಷ ಸಂಜೀವ ಗೌಡ ಸವಣಾಲು, ಕಾರ್ಯದರ್ಶಿ ಹರೀಶ್ ಗೌಡ ಅಣವು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಸರ್ವಸದಸ್ಯರು, ಗ್ರಾಮದ ಸ್ವಜಾತಿ ಬಾಂಧವರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಯುವರಾಜ ಅನಾರು ಕಾರ್ಯಕ್ರಮ ನಿರೂಪಿಸಿ, ಕೇಶವ ಗೌಡ ತಾರಿದಡಿ ಧನ್ಯವಾದವಿತ್ತರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.