ಬದುಕು ಬೆಳಗಿದ ಹೋಳಿಗೆ ತಯಾರಿ

Advt_NewsUnder_1
Advt_NewsUnder_1
Advt_NewsUnder_1

ಬದುಕು ಜಟಾಕಬಂಡಿ ವಿಧಿ ಅದರ ಸಾಹೇಬ? ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬ ಯಶಸ್ವಿ ಶ್ರಮಜೀವಿಯ ಜೀವನದಲ್ಲಿ ವಿಧಿ ಎಂಬ ಭಗವಂತ ಏನೆಲ್ಲ ಮಾಡಿಸಬಲ್ಲ ಎಂಬುದಕ್ಕೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಗ್ರಾಮದ ಪಡಂಗಡಿ ವಲಯದ ಪಣೆಜಾಲು ಎಂಬಲ್ಲಿನ ಪ್ರಭಾವತಿ ಜಯಾರಾಮ್ ರವರ ಜೀವನದ ಹಾದಿ ಪ್ರತಿಯೊಬ್ಬ ವ್ಯಕ್ತಿಗೂ ಅಚ್ಚರಿಯುಂಟು ಮಾಡಬಲ್ಲದು. ಕೇವಲ 8ನೇ ತರಗತಿ ಓದಿದ ಜಯಾರಾಮ್ ಹಾಗೂ 7ನೇ ತರಗತಿ ಓದಿದ ಇವರು ಬಡತನದ ಬೇಗೆಯಿಂದ ಬೆಳೆದು ಬಂದವರು. ಜೀವನದಲ್ಲಿ ಏನಾನ್ನದಾರೂ ಸಾಧಿಸಲು ಹೊರಟ ದಾರಿ ಹೋಳಿಗೆ ತಯಾರಿ ಸ್ವ ಉದ್ಯೋಗ.

ಶ್ರೀಮತಿ ಪ್ರಭಾವತಿ ಜಯಾರಾಮ್ ಪಿರ್ತ್ರಾಜಿತ ಆಸ್ತಿಯಲ್ಲಿ ಯಾವುದೇ ಪಾಲು ಪಡೆಯದೇ ಮದುವೆಯಾದ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಗಮ ಎ ಸ್ವ ಸಹಾಯ ಸಂಘದ ಸದಸ್ಯರಾಗಿ ಕಳೆದ 18 ವರ್ಷಗಳಿಂದ ಸಂಘದ ಸದಸ್ಯರಾಗಿ, ಪದಾಧಿಕಾರಿಗಳಾಗಿ ಸೇರ್ಪಡೆಗೊಂಡರು. ಸಂಘದಿಂದ ಬೇರೆ ಬೇರೆ ಉದ್ದೇಶಗಳಿಗೆ ಈವರೆಗೆ ರೂ12,50,000/-ಸಾಲ ಮಕ್ಕಳ ವಿದ್ಯಾಭ್ಯಾಸ, 0.05ಸೆಂಟ್ಸ್ ಜಾಗ ಖರೀದಿ, ಮನೆ ನಿರ್ಮಾಣ ಮತ್ತು ಮೂಲಭೂತ ಸೌಕರ್ಯ ಮಾಡಿಕೊಂಡಿದ್ದಾರೆ. ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದ ನಡೆಸಲ್ಪಡುತ್ತಿದ್ದ ಪಣಕಜೆ ತಿಂಡಿ ಘಟಕದ ಶ್ರೀನಿಧಿ ಘಟಕದ ಸದಸ್ಯರಾಗಿ, ಸುಮಾರು ಏಳು ವರ್ಷಗಳ ಕಾಲ ಬೇರೆ ಬೇರೆ ಬೇಕರಿ ತಿಂಡಿಗಳನ್ನು ಮಾಡುವುದನ್ನು ಕಲಿತಿರುತ್ತಾರೆ. ಇವರ ಗಂಡ ಜಯರಾಮ್ ರವರು ಉಜಿರೆ ಸಾನಿಧ್ಯ ಇಟ್ಟಿಗೆ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ, ಸಂಜೆಯ ವೇಳೆಯಲ್ಲಿ ಊರಿನ ಪಕ್ಕದಲ್ಲಿ ಹೋಳಿಗೆ ತಯಾರು ಮಾಡುತ್ತಿದ್ದವರಿಂದ ಹೋಳಿಗೆ ಪಡೆದು ಕಲ್ಲಡ್ಕ, ಬಿ.ಸಿ.ರೋಡ್, ಉಪ್ಪಿನಂಗಡಿ, ಮಡಂತ್ಯಾರು ಇತ್ಯಾದಿ ಕಡೆಗಳಿಗೆ ಲೈನ್ ಸೇಲ್ ಮಾಡುತ್ತಿದ್ದರು. ಇದರಿಂದ ಒಂದಷ್ಟು ಅನುಭವ ಪಡೆದು ಸ್ವತಃ ತಾನೇ ಯಾಕೆ ಹೋಳಿಗೆ ತಯಾರಿಯ ಸ್ವ ಉದ್ಯೋಗ ಮಾಡಬಾರದು ಎಂಬುದಾಗಿ ಗಂಡ ಹೆಂಡತಿ ಯೋಚಿಸಿ-ಯೋಜನೆ ರೂಪಿಸಿದರು.

ಇದೇ ಸಂದರ್ಭದಲ್ಲಿ ಸಿರಿ ಸಂಸ್ಥೆಯ ನಿರ್ದೇಶಕಿ  ಮನೋರಮ್ ಭಟ್‌ವರು,   ಪ್ರಭಾವತಿ ಜಯಾರಾಮ್ ತಿಂಡಿ ತಯಾರಿ ತರಬೇತಿಗಾಗಿ ರುಡ್‌ಸೆಟ್ ಸಂಸ್ಥೆಯ ಸ್ವ ಉದ್ಯೋಗ ತರಬೇತಿಯನ್ನು ಪಡೆಯಲು ಕಳುಹಿಸಿಕೊಟ್ಟರು. ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಜೇಮ್ಸ್ ಅಬ್ರಾಹಂರವರ ಪ್ರೇರಣೆ, ಪ್ರೋತ್ಸಾಹ ದಿಂದ ಹಾಗೂ ಸಂಘದ ಮೇಲ್ವಿಚಾರಕರ, ಸೇವಾಪ್ರತಿನಿಧಿ ಮಾರ್ಗದರ್ಶನದಿಂದ ತರಬೇತಿ ಪಡೆದ ಕೇವಲ ದಿನಗಳಲ್ಲಿ ಮನೆಯಲ್ಲಿಯೇ ಸೆಡ್ ನಿರ್ಮಾಣ ಮಾಡಿದರು. ಇದಕ್ಕಾಗಿ ಸ್ವಸಹಾಯ ಸಂಘದಿಂದ ರೂ 250000/- ಸಾಲ ಪಡೆದು ಬೆಂಗಳೂರಿನಿಂದ ಗ್ರೇವಿ ಮೆಷಿನ್ ಖರೀದಿ ಮಾಡಿ ಹೊಳಿಗೆ ತಯಾರಿಸುತ್ತಿದ್ದಾರೆ. ಇವರು ಕಾಯಿ ಹೋಳಿಗೆ ಮತ್ತು ಬೇಳೆ ಹೋಳಿಗೆ ಮಾಡುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಇವರ ಹೋಳಿಗೆಗೆ ಎಲ್ಲಿಲ್ಲದ ಬೇಡಿಕೆ ಇದೆ.

ಯಂ. ಬಾಲಕೃಷ್ಣ ಉಪನ್ಯಾಸಕರು, ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಸುತ್ತ ಮುತ್ತಲಿನ ಸಭೆ ಸಮಾರಂಭಗಳಿಗೆ ಹಾಗೂ 25 ರಿಂದ 30 ಅಂಗಡಿಗಳಿಗೆ ದಿನನಿತ್ಯ ಹೋಳಿಗೆ ನೀಡುತ್ತಿದ್ದಾರೆ. ಚಿಕ್ಕ ಸಂಸಾರ ಸುಖಕ್ಕೆ ಆಧಾರ ಎಂಬಂತೆ 3 ಮಂದಿ ಮಕ್ಕಳನ್ನು ಹೊಂದಿದ್ದು, ಮಗ ಈಗಾಗಲೇ ಬಿ.ಬಿ.ಯಮ್ ಅಂತಿಮ ಪದವಿಯಲ್ಲಿ ಹಾಗೂ ಮಗಳು ಪ್ರಥಮ ವರ್ಷ ಬಿ.ಎಸ್ಸಿ ಯಲ್ಲಿ ಓದುತ್ತಿದ್ದಾಳೆ. ರಜಾ ದಿನಗಳಲ್ಲಿ ಹಾಗೂ ಬಿಡುವಿನ ವೇಳೆಯಲ್ಲಿ ತಂದೆ-ತಾಯಿಯವರ ಸ್ವ ಉಧ್ಯೋಗದಲ್ಲಿ ಕೈ ಜೋಡಿಸುತ್ತಿದ್ದಾರೆ. ಲೆಕ್ಕಾಚಾರದ ಬದುಕು ಇವರ ಕುಟುಂಬದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ. ಸದ್ರಿಯವರು ಸ್ವಂತ ಮನೆಯನ್ನು ಹೊಂದಿದ್ದು, ತಮ್ಮ ಹೋಳಿಗೆ ಘಟಕದಲ್ಲಿ 2 ಮಂದಿ ಮಹಿಳೆಯರಿಗೆ ಉದ್ಯೋಗವನ್ನು ನೀಡಿರುತ್ತಾರೆ. ಬಿಡುವಿಲ್ಲದ ಸರದಾರ, ಅವಿರತಾ ಪರಿಶ್ರಮ ಪಡುವ  ಪ್ರಭಾವತಿ ಯವರು ಮುಂದಿನ ದಿನಗಳಲ್ಲಿ ಬೇಕರಿ ತಿಂಡಿಗಳನ್ನು ಮಾಡುವ ಕನಸು ಹಾಗೂ ಲೈನ್ ಸೇಲ್ ಗಾಡಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಇವರ ಈ ಎಲ್ಲ ಸಾಧನೆಗೆ ಪೂಜ್ಯ ಖಾವಂದರ, ಮಾತೃಶ್ರೀ ಅಮ್ಮನವರ ಆಶೀರ್ವಾದ ಹಾಗೂ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಈ ಎಲ್ಲ ಸಾಧನೆ ಮಾಡುವುದಕ್ಕೆ ಸಾಧ್ಯವಾಗಿದೆ ಎಂಬುದಾಗಿ ತನ್ನ ಮನದಾಳದ ಮಾತುಗಳನ್ನ ನುಡಿಯುತ್ತಾರೆ ಇವರಿಗೆ ಇನ್ನಷ್ಟು ಸಾಧನೆ ಮಾಡಲು ಭಗವಂತನ ಅನುಗ್ರಹವಿರಲಿ ಬದುಕು ಬಂಗಾರವಾಗಲಿ, ಎಂಬುದಾಗಿ ಹಾರೈಸೋಣ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.