ಪಿಯುಸಿ: ಅಂಚಿತಾ ಡಿ. ಜೈನ್ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ

 

ಬೆಳ್ತಂಗಡಿ: 2018-19ನೇ ಸಾಲಿನ ಪದವಿಪೂರ್ವ ಶಿಕ್ಷಣ ಇಲಾಖೆಯು ನಡೆಸಿದ ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಕಾರ್ಕಳ ಕುಕ್ಕುಂದೂರಿನ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು.ಅಂಚಿತಾ ಡಿ ಜೈನ್  ರವರು  573 ಅಂಕಗಳನ್ನು  ಪಡೆದು  ವಿಶಿಷ್ಟ ಶ್ರೇಣಿಯಲ್ಲಿ  ಉತ್ತೀರ್ಣರಾಗಿರುತ್ತಾರೆ
2016-17ರ ಸಾಲಿನಲ್ಲಿ ಸಿ.ಬಿ.ಎಸ್.ಇ ಬೋರ್ಡ್ ದೆಹಲಿ ನಡೆಸಿದ 10ನೇ ತರಗತಿಯ ಪರೀಕ್ಷೆಯಲ್ಲಿಯೂ 10 ಸಿಜಿಪಿಎ ಗ್ರೇಡ್ ಪಡೆದಿರುತ್ತಾರೆ. ಹಾಗೆಯೇ ಸಹಪಠ್ಯ ಚಟುವಟಿಕೆಯಲ್ಲೂ ಕ್ರಿಯಾಶೀಲರಾಗಿದ್ದು, ಬೆಂಗಳೂರು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯಂ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಡ್ರಾಯಿಂಗ್ ಗ್ರೇಡ್ ಲೋಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ತಾಲೂಕಿಗೆ ಪ್ರಥಮ, ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಎನ್‌ಸಿಸಿಯ ಎ ಸರ್ಟಿಫಿಕೇಟ್ ಪರೀಕ್ಷೆಯಲ್ಲಿಯೂ ಎ ಗ್ರೇಡಿಂಗ್ ಪಡೆದಿರುತ್ತಾರೆ  ಅಲ್ಲದೆ  ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಭಾಗವಹಿಸಿರುತ್ತಾರೆ . ಅಂತರ್‌ಶಾಲಾ ಮಟ್ಟದಲ್ಲಿ ನಡೆದ ಪ್ರಬಂಧ, ಭಾಷಣ, ಚಿತ್ರಕಲೆ ಇತ್ಯಾದಿ ಸ್ಪರ್ಧೆಗಳಲ್ಲಿ ಹಾಗೂ ಕ್ರೀಡಾ ವಿಭಾಗದಲ್ಲೂ ಬಹುಮಾನ ಗಳಿಸಿರುತ್ತಾರೆ. ಇವರು  ಪುಂಜಾಲಕಟ್ಟೆ ಪ್ರೌಢಶಾಲಾ ಸಹಶಿಕ್ಷಕ ಧರಣೇಂದ್ರ ಕೆ ಹಾಗೂ ಅನುಪಮ ದಂಪತಿ  ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.