HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಗ್ರಾ.ಪಂ 3 ಕ್ಷೇತ್ರಗಳಿಗೆ 6 ಮಂದಿ ಕಣದಲ್ಲಿ: ಕಾಂಗ್ರೆಸ್-ಬಿಜೆಪಿ ಬೆಂಬಲಿತರ ನಡುವೆ ಪೈಪೋಟಿ

ಬೆಳ್ತಂಗಡಿ : ಉಜಿರೆ ಹಾಗೂ ಕೊಯ್ಯೂರು ಗ್ರಾಮ ಪಂಚಾಯತದ 3 ಸದಸ್ಯ ಸ್ಥಾನಗಳಿಗೆ ಮೇ 29 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಬೆಂಬಲಿತ 6 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಉಜಿರೆ ಗ್ರಾ.ಪಂನ ಕ್ಷೇತ್ರ 4 ಕ್ಕೆ ಬಿಜೆಪಿ ಬೆಂಬಲಿತರಾದ ವೇದಾವತಿ ನಾರಾಯಣ ನಾಯ್ಕ ಬಡೆಕೊಟ್ಟು ಹಾಗೂ ಕಾಂಗ್ರೆಸ್ ಬೆಂಬಲಿತರಾದ ಸುಮಂಗಳ ಜಿನ್ನಪ್ಪ ನಾಯ್ಕ ಬೊಟ್ಟುದಗುಡ್ಡೆ ಅವರು ಅಂತಿಮ ಕಣದಲ್ಲಿದ್ದು, ಇವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಉಜಿರೆ ಕ್ಷೇತ್ರ 11 ರಲ್ಲಿ ಕಾಂಗ್ರೆಸ್ ಬೆಂಬಲಿತರಾದ ಜಿನ್ನಪ್ಪ ನಾಯ್ಕ ಬೊಟ್ಟುದ ಗುಡ್ಡೆ ಹಾಗೂ ಬಿಜೆಪಿ ಬೆಂಬಲಿತರಾದ ಸತೀಶ್ ನಾಯ್ಕ ಅತ್ತಾಜೆ ಅವರು ಕಣದಲ್ಲಿದ್ದು ಇವರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಕೊಯ್ಯೂರು ಗ್ರಾ.ಪಂನ ಕ್ಷೇತ್ರ-2 ಕ್ಕೆ ಕಾಂಗ್ರೆಸ್, ಸಿಪಿಐಎಂ ಬೆಂಬಲಿತರಾದ ಬಾಬು ಹೇಮಲ್ಕೆ ಹಾಗೂ ಬಿಜೆಪಿ ಬೆಂಬಲಿತರಾದ ಕೊರಗಪ್ಪ ಪಿಜಕ್ಕಳ ಅವರು ಅಂತಿಮ ಕಣದಲ್ಲಿದ್ದು, ಇಬ್ಬರ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಮೇ. 26ರಂದು ಬೆಳಗ್ಗೆ 7ರಿಂದ ಸಂಜೆ 5ರ ತನಕ ಮತದಾನ ನಡೆಯಲಿದ್ದು, ಚುನಾವಣೆ ಹಳೆ ಮಾದರಿಯಂತೆ ಮತಪತ್ರದ ಮೂಲಕ ನಡೆಯಲಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.