ಮೇ.26 ರಂದು ಲಾಯಿಲದಲ್ಲಿ ಸಿರಿಧಾನ್ಯ ಕೆಫೆ ಶುಭಾರಂಭ

ಲಾಯಿಲ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಗ್ರಾಮೀಣ ಪ್ರದೇಶದ ದುರ್ಬಲ ಮಹಿಳೆಯರ ಸಶಕ್ತೀಕರಣಕ್ಕಾಗಿ ಹಲವಾರು ಆದಾಯೋತ್ಪನ್ನ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಇದೀಗ ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಆವರಣದಲ್ಲಿ ಮೇ.26 ರಂದು ಸಿರಿಧಾನ್ಯ ಕೆಫೆ ಶುಭಾರಂಭಗೊಳ್ಳಲಿದೆ ಎಂದು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಮನೋರಮಾ ಭಟ್ ತಿಳಿಸಿದರು. ಅವರು ಮೇ.24 ರಂದು ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಪೌಷ್ಠಿಕಾಂಶಗಳ ಕಣಜ ಸಿರಿಧಾನ್ಯಗಳನ್ನು ಉಪಯೋಗಿಸಿಕೊಂಡು ಬೆಳ್ತಂಗಡಿ ತಾಲೂಕಿನಲ್ಲೇ ಏಕೈಕ ಸಿರಿಧಾನ್ಯಗಳ ಆಹಾರ ಮಳಿಗೆ ಮಿಲ್ಲೆಟ್ ಕೆಫೆಯಾಗಿದೆ. ಶುಚಿ ರುಚಿಯಾದ ಆರೋಗ್ಯ ವರ್ಧಕ ಭೋಜನ ಮತ್ತು ಖಾದ್ಯಗಳು ಇಲ್ಲಿ ಲಭ್ಯವಿದೆ. ಸಿರಿಧಾನ್ಯಗಳ ಥಾಲಿ, ಬೆಳಗಿನ ಉಪಹಾರ, ವಿವಿಧ ಜ್ಯೂಸ್‌ಗಳು, ಕರಿದ ತಿಂಡಿಗಳು, ಚಾಟ್ಸ್, ನ್ಯಾಚುರಲ್ ಫ್ರೂಟ್ಸ್ ಐಸ್‌ಕ್ರೀಂ ದೊರೆಯುತ್ತದೆ. ವಿಶಾಲವಾದ ಪಾರ್ಕಿಂಗ್ ಸೌಲಭ್ಯ, ವಿಶೇಷ ಆಕರ್ಷಣೆ ಮಕ್ಕಳಿಗಾಗಿ ಆಟದ ಉದ್ಯಾನ ಮಾಡಲಾಗಿದ್ದು, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಟ್ರಸ್ಟಿ ಶ್ರದ್ಧಾ ಅಮಿತ್ ಉದ್ಘಾಟಿಸಲಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಆಡಳಿತ ನಿರ್ದೇಶಕ ಡಾ| ಎಲ್.ಹೆಚ್ ಮಂಜುನಾಥ್ ಅಧ್ಯಕ್ಷತೆ ವಹಿಸುವರು, ಸಿರಿಧಾನ್ಯ ಆಹಾರ  ತಜ್ಞೆ ಡಾ| ಶಕುಂತಳಾ ಸವದತ್ತಿ, ಸಾವಯವ ಕೃಷಿಕ ಈಶ್ವರನ್ ಸಿ. ತೀರ್ಥ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕ ಬೂದಪ್ಪ ಗೌಡ, ಯೋಜನಾಧಿಕಾರಿ ರೋಹಿತಾಕ್ಷ, ಹಿರಿಯ ಮಾರುಕಟ್ಟೆ ಪ್ರಬಂಧಕ ಸುಧಾಕರ್, ರಾಮ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.