ಧರ್ಮಸ್ಥಳ ಬಸದಿಯಲ್ಲಿ ವಿಶೇಷ ಪೂಜೆ

ಆಧ್ಯಾತ್ಮಿಕ ಚಿಂತನೆಯಿಂದ ಮೋಕ್ಷ ಪ್ರಾಪ್ತಿ

ನಿವೃತ್ತ ಶಿಕ್ಷಕ ಸಿ. ರಘಚಂದ್ರ ಚೌಟ ಉಪನ್ಯಾಸ ನೀಡಿದರು.

ಸಂಸಾರ ಹಾಗೂ ಲೌಕಿಕ ಸುಖ-ಭೋಗಗಳ ಚಿಂತನೆಗಿಂತ ಹೆಚ್ಚು ಆತ್ಮ ಕಲ್ಯಾಣದ ಬಗ್ಯೆ ಹಾಗೂ ಆಧ್ಯಾತ್ಮಿಕ ಚಿಂತನೆಯಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಿವೃತ್ತ ಶಿಕ್ಷಕ ಸಿ. ರಘುಚಂದ್ರ ಚೌಟ ಹೇಳಿದರು.

ಅವರು ಗುರುವಾರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ದಿವಂಗತ ನಮಿರಾಜ ಹೆಗ್ಡೆಯವರ ಆತ್ಮಶಾಂತಿಗಾಗಿ ನಡೆಸಿದ 108 ಕಲಶ ಅಭೀಷೇಕ ಹಾಗೂ ವಿಶೇಷ ಪೂಜೆಯ ಸಂದರ್ಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಶ್ರದ್ಧೆ, ಭಕ್ತಿ ಮತ್ತು ನಂಬಿಕೆಯಿಂದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯವನ್ನು ಅನುಷ್ಠಾನಗೊಳಿಸುವದರೊಂದಿಗೆ ಪಂಚಾಣು ವ್ರತಗಳ ಪಾಲನೆ ಮಾಡಬೇಕು.
ಸಾವು, ದೇಹಕ್ಕೆ ಮಾತ್ರ. ಆತ್ಮನಿಗೆ ಸಾವಿಲ್ಲ. ಆದುದರಿಂದ ಸಾವನ್ನು ಸಂತೋಷದಿಂದ ಸ್ವೀಕರಿಸಿ ಮಹೋತ್ಸವವನ್ನಾಗಿ ಆಚರಿಸಬೇಕು. ಆತ್ಮನಿಗಂಟಿದ ಕರ್ಮದ ಕೊಳೆಯನ್ನೆಲ್ಲ ಕಳೆದಾಗ ಆತ್ಮನೇ ಪರಮಾತ್ಮನಾಗಬಲ್ಲ ಎಂದಯ ಅವರು ಅಭಿಪ್ರಾಯಪಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.