ನಡ ಲಕ್ಷ್ಮೀ ಆಚಾರ್ಯ ನಿಧನ

ನಡ: ಇಲ್ಲಿನ ನಡ ಪೆರ್ಮಾಣು ಮಿತ್ರಪಾದೆ ಮನೆಯ ದಿ| ಲಕ್ಷ್ಮಣ ಆಚಾರ್ಯರ ಧರ್ಮಪತ್ನಿ, ಹಿರಿಯರಾದ ಲಕ್ಷ್ಮೀ ಆಚಾರ್ಯ (93.ವ) ಅವರು ಮೇ.19ರಂದು ನಿಧನರಾಗಿದ್ದಾರೆ.
ತುಂಬಾ ಶ್ರಮಜೀವಿಯಾಗಿದ್ದ ಅವರು ಅತೀ ಇಳಿ ವಯಸ್ಸಿನಲ್ಲಿಯೂ ಮನೆಯ ಗದ್ದೆಯ ಕೆಲಸದಲ್ಲಿ ತೊಡಗಿಕೊಳ್ಳುತ್ತಾ ಕ್ರಿಯಾಶೀಲರಾಗಿದ್ದರು. ತೀರಾ ಬಡತನದ ಹಿನ್ನೆಲೆಯಿಂದ ಬಂದಿದ್ದ ಅವರು ಅತೀ ಕಷ್ಟಕಾಲದಲ್ಲೂ ಮಕ್ಕಳನ್ನು ಸಾಕಿ ಸಲಹಿ ಸಾರ್ಥಕತೆಯ ಜೀವನ ನಡೆಸಿದ್ದರು.
ಮೃತರು ಆರು ಪುತ್ರರಲ್ಲಿ ಇಬ್ಬರು ಈಗಾಗಲೇ ತೀರಿಕೊಂಡಿದ್ದು, ಇದೀಗ ನಾಲ್ವರು ಪುತ್ರರಾದ ಭದ್ರಯ್ಯ ಆಚಾರ್ಯ ನಡ, ಮೋನಪ್ಪ ಆಚಾರ್ಯ, ರಮೇಶ್ ಆಚಾರ್ಯ ಬಾಯಿಕಟ್ಟೆ ಮತ್ತು ಕೇಶವ ಆಚಾರ್ಯ, ಇಬ್ಬರು ಸಹೋದರರು, ಪುತ್ರಿ ಸುಂದರಿ ಮತ್ತು ಮೊಮ್ಮಕ್ಕಳು, ಸೊಸೆಯಂದಿರು ಹಾಗೂ ಬಂಧು ವರ್ಗದವರನ್ನು ಆಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.