ರಾಜ್ಯ ಮಟ್ಟದ ವಕೀಲರ ಯಕ್ಷಗಾನ ಸ್ಪರ್ಧೆ: ಬೆಳ್ತಂಗಡಿಗೆ ದ್ವಿತೀಯ ಸ್ಥಾನ

ಬೆಳ್ತಂಗಡಿ: ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ವಕೀಲರ ಯಕ್ಷಗಾನ ಸ್ಪರ್ಧೆಯಲ್ಲಿ ಬೆಳ್ತಂಗಡಿ ವಕೀಲರ ಸಂಘದ ಸದಸ್ಯರು ಆಡಿ ತೋರಿಸಿದ ಭೀಷ್ಮ ವಿಜಯ ಯಕ್ಷಗಾನ ಪ್ರದರ್ಶನಕ್ಕೆ ದ್ವಿತೀಯ ಬಹುಮಾನ ದೊರೆತಿದೆ. ವಿಜೇತರನ್ನು ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ, ಪ್ರದಾನ ಕಾರ್ಯದರ್ಶಿ ಮನೋಹರ ಕುಮಾರ್ ಮತ್ತು ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ಯಕ್ಷಗಾನ ಕಲಾವಿದರಾದ ಮಹೇಶ್ ಕನ್ಯಾಡಿ ಮತ್ತು ಶಿತಿಕಂಠ ಭಟ್ ನಿರ್ದೇಶನದ ಈ ಪ್ರಸಂಗದಲ್ಲಿ ಪರಶುರಾಮನಾಗಿ ಪಿ.ಸುಬ್ರಹ್ಮಣ್ಯ ಕುಮಾರ್, ಭೀಷ್ಮನಾಗಿ ಬಿ.ಕೆ. ಧನಂಜಯ ರಾವ್, ಸಾಲ್ವನಾಗಿ ಶೈಲೇಶ್.ಆರ್ ಟೋಸರ್, ಅಂಬೆಯಾಗಿ ಜಯಶ್ರೀ ಹೆಬ್ಬಾರ್ ಮತ್ತು ಏಕಲವ್ಯನಾಗಿ ಗಿರೀಶ್ ಮುಳಿಯಾಳ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.