ಬೆಂಗಳೂರಿನ ಭಕ್ತಾದಿಗಳಿಂದ ಧರ್ಮಸ್ಥಳಕ್ಕೆ ಕುಡಿಯುವ ನೀರು ಸರಬರಾಜು 

ಬೆಂಗಳೂರಿನ ಬಸವನಗುಡಿ ಸುಂಕೇನಹಳ್ಳಿಯ ಭಕ್ತಾದಿಗಳು ಧರ್ಮಸ್ಥಳಕ್ಕೆ ಕುಡಿಯುವ ನೀರನ್ನು ಕೊಡುಗೆಯಾಗಿ ನೀಡಿದರು

ಧರ್ಮಸ್ಥಳದಲ್ಲಿ ನೀರಿನ ಕೊರತೆಯನ್ನು ಗಮನಿಸಿದ ಬೆಂಗಳೂರಿನ ಬಸವನಗುಡಿ ಸುಂಕೇನಹಳ್ಳಿಯ ಭಕ್ತಾದಿಗಳು ಸೋಮವಾರ ರಾತ್ರಿ 6780 ಲೀಟರ್ ಕುಡಿಯುವ ನೀರನ್ನು ಕೊಡುಗೆಯಾಗಿ ನೀಡಿದರು. 339 ಕ್ಯಾನ್‌ಗಳಲ್ಲಿ ತಲಾ 20 ಲೀಟರ್‌ನಂತೆ ಒಟ್ಟು6780ಲೀ ನೀರನ್ನು ಅವರು ತಮ್ಮ ವಾಹನಗಳಲ್ಲಿ ಮೇ .20 ರಾತ್ರಿ ತಂದು ಕೊಟ್ಟರು. ಅನ್ನಪೂರ್ಣ ಛತ್ರದಲ್ಲಿ ಅಕ್ಕಿ ಬೇಯಿಸಲು ಹಾಗೂ ಭಕ್ತಾದಿಗಳಿಗೆ ಕುಡಿಯಲು ಈ ನೀರನ್ನು ಬಳಸಲಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.