ವೇಣೂರು: ಅಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನ ತೆಗೆಯುವ ಕಾರ್ಯ ಪೂರ್ಣ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಜೀರ್ಣಾವಸ್ಥೆಯಲ್ಲಿದ್ದ ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಟ್ಟಡವನ್ನು ತೆಗೆಯುವ ಕಾರ್ಯ ಭಾಗಶಃ ಪೂರ್ಣಗೊಂಡಿದೆ. ಕಲ್ಲು ಹಾಗೂ ಸಿಮೆಂಟ್ ಗೋಡೆಗಳಿಂದ ನಿರ್ಮಿಸಲಾಗಿದ್ದ ದೇಗುಲದ ಕಟ್ಟಡವನ್ನು ಕೇವಲ 17 ದಿನಗಳಲ್ಲಿ ಭಕ್ತಾಧಿ ಗ್ರಾಮಸ್ಥರೇ ಶ್ರಮದಾನದ ಮೂಲಕ ತೆಗೆದು ಜೀರ್ಣೋದ್ಧಾರ ಕಾರ್ಯಕ್ಕೆ ವೇಗ ನೀಡಿದ್ದಾರೆ.
ಕಳೆದ ಎ.29 ರಂದು ದೇವರನ್ನು ಬಾಲಾಲಯಲ್ಲಿರಿಸಿ ಅಂದೇ ಜೀರ್ಣೋದ್ಧಾರ ಕೆಲಸ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯರು, ಯುವಕರು ಮಕ್ಕಳೆಲ್ಲರೂ ಕೈಗೆ ಕೈಜೋಡಿಸಿ ದೇವಾಲಯದ ಹಂಚುಗಳನ್ನು ತೆಗೆಯುವ ಕಾರ್ಯ ಮಾಡಿದ್ದರು.
ಪ್ರತಿದಿನ ಕರಸೇವೆ
ಎ.29ರಂದು ಪ್ರಾರಂಭ ಮಾಡಲಾಗಿದ್ದ ದೇವಸ್ಥಾನದ ಕಟ್ಟಡ ತೆಗೆಯುವ ಕಾರ್ಯ ಕೇವಲ 17 ದಿನಗಳಲ್ಲೇ ಪೂರ್ಣಗೊಂಡಿದೆ. ಪ್ರತಿದಿನ ಭಕ್ತಾಧಿ ಗ್ರಾಮಸ್ಥರು ಹಾಗೂ ಸಂಘ ಸಂಸ್ಥೆಯ ಸದಸ್ಯರು, ರಿಕ್ಷಾ ಚಾಲಕ ಮಾಲಕರು, ಸಂಜೆವೇಳೆಗೆ ದೇವಸ್ಥಾನದಲ್ಲಿ ಶ್ರಮದಾನ ನಡೆಸಿ ಕಟ್ಟಡ ತೆಗೆಯುವಲ್ಲಿ ಶ್ರಮಿಸಿದ್ದರು. ಇದೀಗ ಪಾಯ ತೆಗೆಯುವ ಕಾರ್ಯ ನಡೆಯುತ್ತಿದೆ.
ಸುಮಾರು 2015 ರಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಪ್ರಾರಂಭಿಸಲಾಗಿತ್ತು. ಆದರೆ ಆ ಬಳಿಕ ಸುಮಾರು 3 ಕ್ಕೂ ಅಧಿಕ ವರ್ಷಗಳ ಕಾಲ ಜೀರ್ಣೋದ್ಧಾರ ಕಾರ್ಯ ಸ್ಥಗಿತಗೊಂಡಿತ್ತು. ಇದು ಸೀಮೆಯ ಭಕ್ತಾಧಿಗಳಲ್ಲಿ ಭಾರೀ ನೋವು ಉಂಟು ಮಾಡಿತ್ತು. 2018 ರ ಅಂತ್ಯದಲ್ಲಿ ಮತ್ತೆ ನೂತನ ಜೀರ್ಣೋದ್ಧಾರ ಹಾಗೂ ವ್ಯವಸ್ಥಾಪನ ಸಮಿತಿ ರಚನೆಯಾಗಿ ಜೀರ್ಣೋದ್ಧಾರಕ್ಕೆ ಚಾಲನೆ ದೊರೆಯಿತು. ಆ ಬಳಿಕ ಜೀರ್ಣೋದ್ಧಾರ ಕಾರ್ಯ ವೇಗ ಪಡೆದು ಪೂರ್ವಭಾವಿಯಾಗಿ ಶ್ರೀ ಭದ್ರಮಹಾಕಾಳಿ ದೇವಿಗೆ ಶಿಲಾಮಯ ಗುಡಿ ನಿರ್ಮಿಸಿ ಬ್ರಹ್ಮಕಲಶೋತ್ಸವ ಮಾಡಲಾಗಿದೆ. ಇದೀಗ ದೇವಾಲಯದ ಜಾಗವನ್ನು ಸಮತಟ್ಟು ಮಾಡಲಾಗಿದ್ದು, ನೂತನ ದೇವಾಲಯದ ಶಿಲಾನ್ಯಾಸಕ್ಕೆ ಸಿದ್ದತೆ ನಡೆಯುತ್ತಿದೆ. ಒಟ್ಟಿನಲ್ಲಿ ಜೀರ್ಣಾವಸ್ಥೆಯಲ್ಲಿದ್ದ ಸೀಮೆಯ ದೇವಸ್ಥಾನದಿಂದ ಮನನೊಂದಿದ್ದ ಭಕ್ತರು ಸಂತಸ ಬೀರಿದ್ದು, ಶೀಘ್ರ ಅಷ್ಠಬಂಧ ಬ್ರಹ್ಮಕಲಶೋತ್ಸವದ ಯೋಚನೆಯಲ್ಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.