ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಧಾನ ಕಛೇರಿ ಸ್ಥಳಾಂತರಗೊಂಡು ಶುಭಾರಂಭ

ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘ ಗುರುವಾಯನಕೆರೆ ಇದರ ಆವರಣದಲ್ಲಿ ಕಳೆದ 14 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಧಾನ ಕಛೇರಿಯು ಸಮೀಪದಲ್ಲಿರುವ ಸ್ಥಳೀಯ ನೂತನ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡು ಇಂದು(ಮೇ.17) ಶುಭಾರಂಭಗೊಂಡಿತು.
ನೂತನ ಪ್ರಧಾನ ಕಛೇರಿಯ ಉದ್ಘಾಟನೆಯನ್ನು ಸಂಘದ ಅಧ್ಯಕ್ಷ ಎಸ್ ಜಯರಾಮ ಶೆಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ  ಎಂ.ಗೋಪಾಲಕೃಷ್ಣ ಶೆಟ್ಟಿ, ನಿರ್ದೇಶಕರುಗಳಾದ ಬಾಲಕೃಷ್ಣ ಪೂಂಜ, ರಾಮಣ್ಣ ಶೆಟ್ಟಿ ಬಿ, ಕೃಷ್ಣ ರೈ, ಟಿ. ಆರ್ ಅಡ್ಯಂತಾಯ, ಬಿ ನಾರಾಯಣ ಶೆಟ್ಟಿ ಕುಂಠಿನಿ, ಜಯಂತ ಶೆಟ್ಟಿ ಕುಂಠಿನಿ, ಪುಷ್ಪರಾಜ ಶೆಟ್ಟಿ, ಸೀತಾರಾಮ ಶೆಟ್ಟಿ ಬಿ, ಶ್ರೀಮತಿ ಅಂಬಾ ಬಿ ಆಳ್ವ, ಪ್ರಕಾಶ್ ಶೆಟ್ಟಿ ನೊಚ್ಚ, ರಘುರಾಮ ಶೆಟ್ಟಿ ಸಾಧನಾ ಉಜಿರೆ, ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ, ಬೆಳ್ತಂಗಡಿ ತಾಲೂಕು ಸಮಾನ ಮನಸ್ಕ ಬಂಟ ಸಮಾಜದ 500 ಸದಸ್ಯರ ರೂ.10 ಲಕ್ಷ ಪಾಲುಬಂಡವಾಳದೊಂದಿಗೆ 2005 ಅಕ್ಟೋಬರ್ 10ರಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಅಮೃತ ಹಸ್ತದಿಂದ ಸಂಘದ ಪ್ರಥಮ ಕಛೇರಿ ಉದ್ಘಾಟನೆಗೊಂಡಿದ್ದು, ಕಳೆದ 14 ವರ್ಷಗಳಲ್ಲಿ ಸಂಸ್ಥೆಯು ಆರ್ಥಿಕ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ.
ಸಂಘವು ಉತ್ತಮ ಆಡಳಿತದೊಂದಿಗೆ ಅಭಿವೃದ್ಧಿಯಲ್ಲಿ ಸಾಗುತ್ತಿದ್ದು, ಕಳೆದ 14 ಆರ್ಥಿಕ ವರ್ಷಗಳಲ್ಲಿ ದ.ಕ, ಉಡುಪಿ ಜಿಲ್ಲೆಗಳಲ್ಲಿ ಒಟ್ಟು 20 ಶಾಖೆಗಳನ್ನು ಹೊಂದಿರುತ್ತದೆ. ಅಲ್ಲದೆ ಸಂಘದ ವ್ಯವಹಾರವು ಕೂಡ ಉತ್ತಮ ರೀತಿಯಲ್ಲಿ ಅಭಿವೃಧ್ಧಿಯಾಗತ್ತಿದ್ದು, ಕಳೆದ ಮಾರ್ಚ್ 2019 ರ ವರ್ಷಾಂತ್ಯಕ್ಕೆ ರೂ.165 ಕೋಟಿ ವ್ಯವಹಾರ ನಡೆಸಿರುತ್ತದೆ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.