ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಪರಿವಾರ ದೈವಗಳ ಪ್ರತಿಷ್ಠೆ

Advt_NewsUnder_1
Advt_NewsUnder_1

ಬೆಳಾಲು: ಇಲ್ಲಿಯ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನೂತನ ಬಿಂಬ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಮೇ.17 ರಂದು ಬೆಳಿಗ್ಗೆ ವೇದಮೂರ್ತಿ ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಗಣಹೋಮ, ಇಂದ್ರಾದಿ ಪರಿವಾರ ಪ್ರತಿಷ್ಠೆ, ಕ್ಷೇತ್ರಪಾಲ ಪ್ರತಿಷ್ಠೆ, ಪರಿವಾರ ದೈವಗಳಾದ ಶ್ರೀ ರಕ್ತೇಶ್ವರಿ, ಕ್ಲಲುರ್ಟಿ, ಪಂಜುರ್ಲಿ, ಭೈರವ ದೈವಗಳ ಪ್ರತಿಷ್ಠೆ ನಡೆಯಿತು.
ಊರಿನ ಋತ್ವಿಜರಿಂದ ಒಂದು ಮಂಡಲ(48ಬಾರಿ) ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆದು, ಬೈಪಾಡಿ-ಬಂದಾರು ಶ್ರೀ ಸಿದ್ಧಿವಿನಾಯಕ ಭಜನಾಮಂಡಳಿ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮದ್ಯಾಹ್ನ ಮಂಟಪದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.